February 3, 2026

ಕ್ಯಾಂಟರ್, ಆಟೋ ನಡುವೆ ಭೀಕರ ಅಪಘಾತ: ಮೂವರು ದಾರುಣವಾಗಿ ಸಾವು

0
image_editor_output_image1970067834-1670817955423.jpg

ಬೆಂಗಳೂರು: ಕ್ಯಾಂಟರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಡಿ ಭಾಗವಾದ ರಂಗನಹಳ್ಳಿ ಗೇಟ್ ಬಳಿ ನಡೆದಿದೆ.

ಕೊರಟಗೆರೆಯ ಮೀಲಾನಿ(25), ಜೈರಬಿ(70) ಸ್ಥಳದಲ್ಲೇ ವೃತಪಟ್ಟಿದ್ದು, ಆಟೋ‌ ಚಾಲಕ ಕಲಂದರ್ ಗೌರಿಬಿದನೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಗಾಯಗೊಂಡಿರುವ ಅರ್ಪ (5), ಅಸೀತಾ (3) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗೌರಿಬಿದನೂರು ತಾಲೂಕಿನ ಅಲಕಾಪುರಕ್ಕೆ ಆಗಮಿಸಿ ಕೆಲಸ ಮುಗಿಸಿಕೊಂಡು ವಾಪಸ್ ಕೊರಟಗೆರೆಗೆ ತೆರಳುವ ವೇಳೆ ಅಪಘಾತವಾಗಿದೆ.

Leave a Reply

Your email address will not be published. Required fields are marked *

error: Content is protected !!