September 29, 2026

ಉಳ್ಳಾಲ: ಕುಟುಂಬದವರ ಜೊತೆಗೆ ಸೋಮೇಶ್ವರ ಬೀಚ್‌ಗೆ ಹೋಗಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

0
image_editor_output_image-107631569-1670749906379.jpg

ಉಳ್ಳಾಲ: ಕುಟುಂಬದವರ ಜೊತೆಗೆ ಸೋಮೇಶ್ವರ ಬೀಚ್‌ಗೆ ಹೋದ ವ್ಯಕ್ತಿ ಕುಟುಂಬದವರ ಎದುರಲ್ಲೇ ನೀರು ಪಾಲಾದ ಇಂದು ಬೆಳಿಗ್ಗೆ ನಡೆದಿದೆ.

ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಮೃತ ವ್ಯಕ್ತಿ .

 

ಮೃತ ಪ್ರಶಾಂತ್‌ ಮಂಗಳೂರಿನ ಎಸ್‌.ಡಿ.ಎಮ್ ಕಾಲೇಜಲ್ಲಿ ಬಸ್‌ ಚಾಲಕರಾಗಿದ್ದರು. ಪ್ರಶಾಂತ್ ಇಂದು ಬೆಳಗ್ಗೆ ಪುತ್ರನಾದ ಚಿರಾಯು ಬೇಕಲ್‌, ಸಹೋದರ ವರದರಾಜ್ ಬೇಕಲ್ ಅವರ ಮಗ ವಂದನ್ ಬೇಕಲ್‌, ಮತ್ತು ಇತರರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು. ಪ್ರತೀ ಆದಿತ್ಯವಾರವೂ ಪ್ರಶಾಂತ್ ಅವರು ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳುತ್ತಿದ್ದರು.

ಎಂದಿನಂತೆ ಇಂದು ಬೆಳಗ್ಗೆ ಪ್ರಶಾಂತ್ ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!