ಕತಾರ್ ನಲ್ಲಿ ಭೀಕರ ಅಪಘಾತ: ಬಂಟ್ವಾಳದ ಯುವಕ ಮೃತ್ಯು

ಬಂಟ್ವಾಳ ಮೂಲದ ವ್ಯಕ್ತಿಯೋರ್ವ ವಿದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹಾದ್ ಮೃತಪಟ್ಟ ಅವಿವಾಹಿತ ಯುವಕ.
ಫಹಾದ್ ಅವರು ಕಳೆದ ಐದು ತಿಂಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು. ಬಂಟ್ವಾಳ ದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಇವರು ಕತಾರ್ ನಲ್ಲಿ ಕಾರು ಚಾಲಕ ಉದ್ಯೋಗದ ನಿಮಿತ್ತ ತೆರಳಿದ್ದರು. ಸೌದಿ ಅರೇಬಿಯಾ ದ ಕುಟುಂಬವೊಂದರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಯುವಕ ಇಂದು ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಬಡಕುಟುಂಬದಲ್ಲಿದ್ದ ಫಯಾದ್ ಅವರ ತಂದೆಯೂ ಟಿಪ್ಪರ್ ಚಾಲಕನಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ.
ಮೃತಪಟ್ಟ ಯುವಕ ತಂದೆ ,ತಾಯಿ ಹಾಗೂ ತಮ್ಮನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾನೆ.
