ಮುಲ್ಕಿ: ಜಿಎಂ ಮೆಡಿಕಲ್ ಅಂಗಡಿಯಲ್ಲಿ ಕಳ್ಳತನ
ಮುಲ್ಕಿ: ಇಲ್ಲಿನ ಬಸ್ಸುನಿಲ್ದಾಣದ ಮೆಡಿಕಲ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಮುಲ್ಕಿ ಬಸ್ ನಿಲ್ದಾಣದ ಬಳಿಯ ಜಿಎಂ ಮೆಡಿಕಲ್ಸ್ ಅಂಗಡಿಯ ಬದಿಯಲ್ಲಿರುವ ಆವರಣಗೋಡೆ ಯಿಂದ ಮೆಡಿಕಲ್ ಅಂಗಡಿಯ ಮೇಲ್ಗಡೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಹಣದ ಡ್ರಾವರನ್ನು ಜಾಲಾಡಿ ಸುಮಾರು 2000 ವರೆಗೆ ನಗದು ಕಳ್ಳತನ ಮಾಡಿದ್ದಾರೆ.
ಜಿಎಂ ಮೆಡಿಕಲ್ಸ್ ನಲ್ಲಿ ಕಳ್ಳತನ ನಡೆದಿರುವುದು ಐದನೇ ಬಾರಿ ಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಇದೇ ರೀತಿಯ ಕಳ್ಳತನ ಕಳೆದ ದಿನಗಳ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಕಾರ್ನಾಡು ಪರಿಸರದಲ್ಲಿ ನಡೆದಿದ್ದು ಯಾರೋ ಗೊತ್ತಿದ್ದವರೇ ಕಳ್ಳತನದ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಮೆಡಿಕಲ್ ಅಂಗಡಿಯ ಮಾಲೀಕ ವಿನಯ ರಾಜ್ ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.





