ಸುಳ್ಯ: ಮದ್ಯದ ನಶೆಯಲ್ಲಿದ್ದ ಜೀಪ್ ಚಾಲಕನ ಅವಾಂತರ: ನಾಲ್ಕು ಬೈಕ್, ಕಾರು ಜಖಂ
ಸುಳ್ಯ : ಸುಳ್ಯದ ಅಂಬಟಡ್ಕದಲ್ಲಿ ಮದ್ಯದ ನಶೆಯಲ್ಲಿ ಕುಡುಕನೋರ್ವ ಜೀಪು ಚಲಾಯಿಸಿದ್ದು, ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಡಿಕ್ಕಿಯಾದ ಘಟನೆ ನಡೆದಿದೆ.
ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಾಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದ್ದು, ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ಹೊಟೇಲ್ ಒಂದರ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ.
ಇನ್ನು ಪೊಲೀಸರು ಕುಡುಕ ಜೀಪು ಚಾಲಕನನ್ನು ಠಾಣೆ ಕರದೊಯ್ದಿದ್ದಾರೆ.






