ಉಡುಪಿ: ಪೆಟ್ರೋಲ್ ಬಂಕ್‌ನ ಮಿನಿ ಎಟಿಎಂ ಮೆಷಿನ್ ಹ್ಯಾಕ್: ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಉಡುಪಿ: ಪೆಟ್ರೋಲ್ ಬಂಕ್‌ನ ಮಿನಿ ಎಟಿಎಂ ಮೆಷಿನ್ ಹ್ಯಾಕ್ ಮಾಡಿ ಸಾವಿರಾರು ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡುವ ಮೂಲಕ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ ಶೆಟ್ಟಿ ಮಾಲಕತ್ವದ ಇಡೂರು ಕುಂಜ್ಞಾಡಿಯಲ್ಲಿರುವ ಮಾತೃಶ್ರೀ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಮಲ್ಲಿಕಾರ್ಜುನ ಶೆಟ್ಟಿ, 2 ವರ್ಷಗಳ ಹಿಂದೆ ಫಿನೋ ಬ್ಯಾಂಕ್ ವತಿಯಿಂದ ಮಿನಿ ಎಟಿಎಂ ಮೆಷಿನ್‌ನ್ನು ಪೆಟ್ರೋಲ್ ಬಂಕ್ ವ್ಯವಹಾರಕ್ಕಾಗಿ ಪಡೆದುಕೊಂಡಿದ್ದರು.
ಆದ್ರೆ ನ.23ರಂದು ಸಂಜೆ ಮಲ್ಲಿಕಾರ್ಜುನ ಶೆಟ್ಟಿ, ಮಾಲಕರ ಖಾತೆಗೆ ವರ್ಗಾವಣೆ ಮಾಡಲು ಮಿನಿ ಎಟಿಎಂನ್ನು ಪರಿಶೀಲಿಸಿದಾಗ ಫಿನೋ ಖಾತೆಯಲ್ಲಿ 12.24 ರೂ. ಹಣ ಇರುವುದು ಗಮನಿಸಿ, ಫಿನೋ ಬ್ಯಾಂಕಿನ ಸ್ಟೇಟ್‌ಮೆಂಟ್ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಅದೇ ದಿನ 38,550ರೂ. ಹಣವು ಯಾವುದೋ ಅಪರಿಚಿತ ಮೊಬೈಲ್ ನಂಬರ್‌ಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ.
ಇನ್ನು ಅಪರಿಚಿತ ವ್ಯಕ್ತಿಗಳು ಫಿನೋ ಬ್ಯಾಂಕಿನ ಮಿನಿ ಎಟಿಎಂ ಮೆಷಿನ್‌ನ್ನು ಹ್ಯಾಕ್ ಮಾಡಿ, ಸಂಸ್ಥೆಯ 38,550ರೂ. ಹಣವನ್ನು ಮೋಸದಿಂದ ಪಡೆದು ಸಂಸ್ಥೆಗೆ ನಷ್ಟ ಉಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.






