ರೈಲ್ವೆ ಸೇತುವೆಯಲ್ಲಿ ಹೋಗುತ್ತಿದ್ದಾಗ ನದಿಗೆ ಬಿದ್ದು ಬಾಲಕಿ ಸಾವು
ಜಮ್ಮು: ರೈಲು ಬರುತ್ತಿರುವುದನ್ನು ಕಂಡು ರೈಲ್ವೆ ಸೇತುವೆಯಿಂದ ಜಿಗಿದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಇಬ್ಬರು ಸಹೋದರರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಹೊರವಲಯದಲ್ಲಿ ನಡೆದಿದೆ.
ಇಬ್ಬರು ಸಹೋದರಿಯರಾದ ಅಲಿಯಾ ಫಾತಿಮಾ ಮತ್ತು ಹಾದಿಯಾ ಫಾತಿಮಾ ಮತ್ತು ಅವರ ಸಹೋದರ ಮೊಹಿಯುದ್ದೀನ್ (12) ಶಾಲೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮೂವರು ಮಕ್ಕಳು ಜಮ್ಮುವಿನಿಂದ ಉಧಂಪುರಕ್ಕೆ ರೈಲು ಬರುತ್ತಿರುವುದನ್ನು ನೋಡಿ ಸುಮಾರು 35-30 ಅಡಿ ಎತ್ತರದ ಸೇತುವೆಯಿಂದ ಜಿಗಿದಿದ್ದು, ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮೂವರು ಮಕ್ಕಳನ್ನು ಜಮ್ಮು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಇನ್ನು ರೈಲು ಬರುತ್ತಿರುವುದನ್ನು ಗಮನಿಸಿದ ಮಕ್ಕಳು ಗಾಬರಿಗೊಂಡು ಸೇತುವೆಯಿಂದ ಜಿಗಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.