ತುಳು ನಟ ನವೀನ್ ಡಿ. ಪಡೀಲ್ ಆಸ್ಪತ್ರೆಗೆ ದಾಖಲು
ಮಂಗಳೂರು: ತುಳು ಸಿನಿಮಾ ರಂಗದ ಖ್ಯಾತ ನಟ ನವೀನ್ ಡಿ. ಪಡೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿನಿಮಾದ ಚಿತ್ರೀಕರಣ ವೇಳೆ ಬಿದ್ದು ಏಟು ಮಾಡಿಕೊಂಡ ಪರಿಣಾಮ ಅವರ ತೊಡೆಯ ಮೂಳೆ ಮುರಿತವಾಗಿದ್ದು, ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಸದ್ಯ ಅವರು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.




