August 16, 2026

ಬೆಳ್ತಂಗಡಿ: ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ

0
image_editor_output_image-1536966732-1669186879862.jpg

ಬೆಳ್ತಂಗಡಿ : ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬೆಳಿಗ್ಗೆ ಕೆಲಸಕ್ಕೆಂದು ಹೊರಟು ಹೋಗಿ ನಾಪತ್ತೆಯಾದ ಘಟನೆ ಉಜಿರೆಯಲ್ಲಿ ನಡೆದಿದೆ, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಶಿನ ಅವರ ಪುತ್ರಿ ಪ್ರಮೀಳ (18) ನಾಪತ್ತೆಯಾದ ಯುವತಿ.

ಪ್ರಮೀಳಾ ಎಂದಿನಂತೆ ನವೆಂಬರ್ 21 ರಂದು ಉಜಿರೆ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕೆಂದು ತೆರಳಿದ್ದಾಳೆ. ಬೆಳಗ್ಗೆ 7.00 ಗಂಟೆಗೆ ಮನೆಯಿಂದ ಹೋಗಿದ್ದು, ಬಳಿಕ ಕೆಲಸಕ್ಕೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ.

ಕನ್ನಡ, ತುಳು ಮಾತನಾಡುವ ಈಕೆ ಮನೆಯಿಂದ ಹೋಗುವ ವೇಳೆ ಆಕಾಶ ನೀಲಿ ಬಣ್ಣದ ಟಾಪ್‌ ಮತ್ತು ಕೆಂಪು ಬಣ್ಣದ ಲೆಗ್ಗಿನ್ಸ್‌ ಪ್ಯಾಂಟ್‌ ಧರಿಸಿದ್ದಳು ಎನ್ನಲಾಗಿದೆ. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ (08256232093) ತಿಳಿಸುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!