March 20, 2026

ಯಾದಗಿರಿ: ಲಾರಿ-ಆಟೊ ಢಿಕ್ಕಿ; ಮೂವರು ಸ್ಥಳದಲ್ಲೇ ಮೃತ್ಯು

0
Screenshot_2021-11-13-10-51-14-67_680d03679600f7af0b4c700c6b270fe7.jpg

ಯಾದಗಿರಿ: ನಗರ ಹೊರವಲಯದ ಮುದ್ನಾಳ ಕ್ರಾಸ್ ಬಳಿ ಲಾರಿ ಮತ್ತು ಆಟೊ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ಕಂಚಗಾರಹಳ್ಳಿ ನಿವಾಸಿಗಳಾದ ಲಕ್ಷ್ಮಣ ನಾಮದೇವ (26), ಜಯರಾಮ ರಾಮಚಂದ್ರ ಚವಾಣ್ (45), ಕೃಷ್ಣ ಸಂತೋಷ (2.5) ತಿಂಗಳ ಮಗು ಸಾವನ್ನಪ್ಪಿದ್ದಾರೆ. ಆರು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ.

ಶುಕ್ರವಾರ ಮಧ್ಯರಾತ್ರಿ 12:30 ಕ್ಕೆ ವಾಡಿ ಕಡೆಯಿಂದ ಆಗಮಿಸುತ್ತಿದ್ದ ಲಾರಿ, ಯಾದಗಿರಿಯಿಂದ ಕಂಚಗಾರಹಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೊ ಪರಸ್ಪರ ಡಿಕ್ಕಿಯಾಗಿವೆ. ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.‌ ಆರು ಜನರು ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!