February 4, 2026

ಉಳ್ಳಾಲ: ಅಪರಿಚಿತರಿಂದ ಯುವಕನ ಮೇಲೆ ಹಲ್ಲೆ, ಬೈಕ್ ಕಿತ್ತು ಪರಾರಿ – ದೂರು ದಾಖಲು

0
IMG-20221119-WA0031.jpg

ಉಳ್ಳಾಲ: ಮಂಜೇಶ್ವರ ಮೂಲದ ಯುವಕನೊಬ್ಬ ಕುತ್ತಾರ್‌‌ನಲ್ಲಿರುವ ಅಜ್ಜಿ ಮನೆಗೆಂದು ಬರುತ್ತಿದ್ದಾಗ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದ್ದ ಮೂವರು ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್ ಬಳಿ ನಡೆದಿದೆ.

ಮಂಜೇಶ್ವರ ಮೂಲದ ಪ್ರಪುಲ್‍ರಾಜ್ ಹಲ್ಲೆಗೊಳಗಾದ ಯುವಕ.

ಪ್ರಪುಲ್‍ರಾಜ್ ಅವರು ಕುತ್ತಾರ್‌‌ನಲ್ಲಿರುವ ಅಜ್ಜಿ ಮನೆಗೆಂದು ಮಂಜೇಶ್ವರದಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದು, ರಾತ್ರಿ ವೇಳೆ ಅಂಬಿಕಾರೋಡ್ ತಲುಪಿದಾಗ 3 ಜನ ಅಪರಿಚಿತರು ವಾಹನ ನಿಲ್ಲಿಸಿ ಬಳಿಕ ಪ್ರಪುಲ್‍ರಾಜ್‍ಗೆ ಅವಾಚ್ಯ ಶಬ್ದಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇನ್ನು ಗಂಭೀರ ಗಾಯಗೊಂಡ ಪ್ರಫುಲ್ ರಾಜ್ ತೊಕ್ಕೊಟು ಖಾಸಗಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!