ವಿಟ್ಲ: ಲಯನ್ಸ್ ಕ್ಲಬ್, ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ವಾಹನ ಸಂಚಾರ ಹಾಗೂ ನಿರ್ವಹಣೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಹಾಗೂ ಆಟೋರಿಕ್ಷಾ ಚಾಲಕರ ಮಾಲಕರ ಸಂಘ (ಆರ್‌ಸಿಎಮ್‌ಎಸ್)ವಿಟ್ಲ, ಇದರ ಜಂಟಿ ಆಶ್ರಯದಲ್ಲಿ ನ.13ರಂದು ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವಾಹನ ಸಂಚಾರ ಹಾಗೂ ನಿರ್ವಹಣೆ ಕಾರ್ಯಕ್ರಮವು ನಡೆಯಿತು.
ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ ಎಸ್ ಆದರ್ಶ್ ಇವರಿಂದ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡು, ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ತಿಮ್ಮಯ್ಯ ಗೌಡ ಇವರು ವಾಹನ ಸಂಚಾರ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಹಿರಿಯ ಅಧ್ಯಕ್ಷ ಚಂದ್ರಶೇಖರ ಕೆ ವಿ ವಕೀಲರು, ವಿ ಎಸ್ ಇಬ್ರಾಹಿಂ, ಉಪಾಧ್ಯಕ್ಷರು ವರ್ತಕರ ಸಂಘ ವಿಟ್ಲ, ಪ್ರಕಾಶ್ ಗೌರವಾಧ್ಯಕ್ಷರು ಬಿಲ್ಲವ ಸಂಘ ವಿಟ್ಲ, ಸೀತಾರಾಮ್ ಗೌಡ, ಸಾಲೆತ್ತೂರು, ಅಧ್ಯಕ್ಷರು ಆಟೋರಿಕ್ಷ ಚಾಲಕ ಮಾಲಕರ ಸಂಘ, ಸಾಲೆತ್ತೂರು ಉಪಸ್ಥಿತರಿದ್ದು, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ಲಯನ್ಸ್ ಜಿಲ್ಲಾ ಪ್ರಾಂತೀಯ ಏಳರ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್ ಇವರುಗಳನ್ನು ಗೌರವ ಪೂರಕ ಸನ್ಮಾನಿಸಲಾಯಿತು.
ಶ್ರೀಮತಿ ಸುನಿತಾ ರೈ ಸಾಲೆತ್ತೂರು ಪ್ರಾರ್ಥನೆ ಗೈದರು, ಹಿರಿಯ ಆಟೋ ಚಾಲಕ ಜನಾರ್ಧನ ಪೂಜಾರಿಯವರ ಸ್ವಾಗತ ಮಾಡಿದರು, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷರಾದ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆ ಇವರು ಪ್ರಸ್ತಾಪನಾ ಭಾಷಣ ಮಾಡಿದರು, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಕಾರ್ಯದರ್ಶಿ ಹರೀಶ್ ಶೆಟ್ಟಿ ಡಿ, ನೆರೆದ ಎಲ್ಲಾ ಜನರಿಗೆ ಧನ್ಯವಾದ ನೀಡಿದರು. ಶ್ರೀ ವಸಂತ್ ಶೆಟ್ಟಿ ಕಾಪುಕೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.





