ಆಲ್ ಇಂಡಿಯಾ ಕೆಎಂಸಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಸ್ತಿತ್ವಕ್ಕೆ:
ಅಧ್ಯಕ್ಷರಾಗಿ ಸಲೀಂ ಹಂಡೆಲ್ ಆಯ್ಕೆ
ಬಿ.ಸಿ ರೋಡ್ : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ಅಂಗ ಸಂಸ್ಥೆಯಾದ ಎ.ಐ.ಕೆ.ಎಂ.ಸಿ.ಸಿ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ಪಾಣೆಮಂಗಳೂರಿನ ಎಸ್.ಎಸ್. ಆಡಿಟೋರಿಯಂ ನಲ್ಲಿ ನಡೆಯಿತು.
ಸಯ್ಯದ್ ಆಫ್ಹಂ ಅಲಿ ತಂಙಳ್ ದುಃಅ ದೊಂದಿಗೆ ಚಾಲನೆ ನೀಡಿದರು. ಸಯ್ಯದ್ ಸೈಫುಲ್ಲಾಹ್ ತಂಙಳ್ ಉದ್ಘಾಟಿಸಿದರು. ಎಂ.ಕೆ ನೌಶಾದ್ ಅಧ್ಯಕ್ಷತೆ ವಹಿಸಿದ್ದರು.
ಎ.ಐ.ಕೆ.ಎಂ.ಸಿ.ಸಿ ಕಾರ್ಯದರ್ಶಿ ಉಸ್ತಾದ್ ರಫೀಕ್ ಮೌಲವಿ ಸಂಘದ ಕಾರ್ಯ ವೈಖರಿಗಳ ಕುರಿತು ಮಾತನಾಡಿ ಮಾನವಕುಲದ ಸೇವೆಯ ಧೃಡ ಸಂಕಲ್ಪವನ್ನ ಹೊತ್ತುಕ್ಕೊಂಡು ಜಾತಿ ಮತ ಪಂಥ ಪಂಗಡ ಭೇದವಿಲ್ಲದೆ ಎಲ್ಲಾ ಅಸಹಾಯಕರ ಕಣ್ಣೀರು ಒರೆಸಿ ಎ.ಐ.ಕೆ.ಎಂ.ಸಿ.ಸಿ ಮುನ್ನಡೆಯುತ್ತಿದೆ. ಜಗತ್ತಿನ ನಾನಾ ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೆಎಂಸಿಸಿ ಸಂಘಟನೆ ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಸೇವೆ ನೀಡುತ್ತಾ ಬಂದಿದೆ. ಆಂಬುಲೆನ್ಸ್ ಸೇವೆ ಅಪಘಾತ ಸಂಬವಿಸಿದ್ದಲ್ಲಿ ತುರ್ತಾಗಿ ಬೇಕಾದ ಚಿಕಿತ್ಸೆ, ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ, ಕಲಿಯುವ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡ ರೋಗಿಗಳಿಗೆ ಸಹಾಯ, ನಿರಂತರವಾಗಿ ಮಲಗಿದ್ದಲ್ಲೇ ಇರುವಂತಹ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಆರೋಗ್ಯ ಸೇವೆ, ಹೊರದೇಶಗಳಲ್ಲಿ ಸಂಕಷ್ಟಕ್ಕೀಡಾದಾಗ ಜನರಿಗೆ ಬೇಕಾದ ಸಹಾಯ, ಮೃತ ಶರೀರದ ದಫನ ಕಾರ್ಯ ಹಾಗೂ ಕೋವಿಡ್ ಸಂದರ್ಭದಲ್ಲಿ ಶಕ್ತಿ ಮೀರಿ ಸೇವೆ ನೀಡುತ್ತಾ ಬಂದಿದ್ದು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನೋವು ಅನುಭವಿಸುವ ಬಡ ಕುಟುಂಬಗಳಿಗೆ ನಮ್ಮಸೇವೆ ತಲುಪಬೇಕೆನ್ನುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಸಮಿತಿಯನ್ನು ರಚಿಸಲಾಯಿತು ಎಂದರು.
ಡಾ.ಸಾಫೀಲ್ ಐ.ಕೆ, ಸಿದ್ದೀಕ್ ತಲಪಾಡಿ, ಸಿದ್ದೀಕ್ ಮಂಜೇಶ್ವರ, ಅಶ್ರಫ್ ಪಿ.ವಿ, ರಹೀಮ್ ಚಾವಶೇರಿ ಉಪಸ್ಥಿತರಿದ್ದರು. 2021- 22ನೇ ನೂತನ ಸಾಲಿನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಲೀಮ್ ಹಂಡೆಲ್, ಉಪಾಧ್ಯಕ್ಷರುಗಳಾಗಿ

ಉಸ್ಮಾನ್ ಅಬ್ದುಲ್ಲಾ ಸೂರಿಂಜೆ,
ಅಝರುದ್ದೀನ್ ಕೊಡಂಗಾಯಿ,
ಅರಿಫ್ ಬಡಕಬೈಲ್,
ಪಿ. ಎಂ ಅಶ್ರಫ್ ಪುತ್ತೂರು,
ಉಬೈದುಲ್ಲಾ ವಿಟ್ಲ. ಕಾರ್ಯದರ್ಶಿಯಾಗಿ ಸಯ್ಯದ್ ಆಫ್ಹಾಂ ಅಲಿ ತಂಙಳ್, ಜೊತೆ ಕಾರ್ಯದರ್ಶಿಗಳಾಗಿ
ಇಮ್ತಿಯಾಜ್ ತೋಡಾರ್,
ಉಸ್ಮಾನ್ ಸಾಗ್,
ಅಬ್ದುಲ್ ಸಮದ್ ಜೆಪ್ಪು,
ಹಮೀದ್ ಬೆಳ್ಳಾರೆ,
ಆರ್ಷದ್ ಸರವು, ಕೋಶಧಿಕಾರಿಯಾಗಿ ಇಬ್ರಾಹಿಂ ಹಾಜಿ ಸುಳ್ಯ, ಮೆಡಿಕಲ್ ವಿಂಗ್ ಉಸ್ತುವಾರಿ ಗಳಾಗಿ ಡಾ.ಶಾಫಿಲ್ ಐ.ಕೆ,
ಸಹಾಯಕರುಗಳಾಗಿ
ಸಿದ್ದೀಕ್ ತಲಪಾಡಿ,
ಹನೀಫ್ ಎಚ್.ಎಂ.ಟಿ ತೋಡಾರ್, ಹೈದರ್ ಕಳಂಜ.
ಮಾಧ್ಯಮ ಕಾರ್ಯದರ್ಶಿಗಳಾಗಿ
ತಾಜುದೀನ್ ಟರ್ಲಿ ಕಲ್ಲುಗುಂಡಿ, ತ್ವಯ್ಯಿಬ್ ಫೈಝಿ ಬೊಳ್ಳೂರು. ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ರಾಗಿ ಶಂಸುದ್ದಿನ್ ಎ.ಎಂ ಅರಂತೋಡು, ಕೆ.ಎಂ ಮುಸ್ತಫಾ ಮಲಾರ್, ಇವರುಗಳು ಆಯ್ಕೆಯಾಗಿದ್ದಾರೆ.





