February 3, 2026

ತನ್ನ ಕುಟುಂಬದ ಮೂವರು ಸದಸ್ಯರನ್ನು, ನೆರೆಹೊರೆಯವರನ್ನು ಹತ್ಯೆ ಮಾಡಿದ 16 ವರ್ಷದ ಬಾಲಕ

0
Screenshot_2022-11-07-13-25-24-58_680d03679600f7af0b4c700c6b270fe7.jpg

ಅಗರ್ತಲಾ: ತ್ರಿಪುರಾದ ದಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಮೂವರು ಸದಸ್ಯರನ್ನು ಮತ್ತು ನೆರೆಹೊರೆಯವರನ್ನು ಕೊಲೆ ಮಾಡಿ ಶವಗಳನ್ನು ಬಾವಿಗೆ ಎಸೆದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಆರೋಪಿ ಬಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ಕಮಲ್‌ಪುರ ಉಪವಿಭಾಗದ ನಿವಾಸಿಯಾದ ಬಾಲಕ ನಿತ್ಯ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ತಂದೆ ಇಲ್ಲದಿದ್ದಾಗ ತಾಯಿ, ಅಜ್ಜ, 10 ವರ್ಷದ ಸಹೋದರಿ ಹಾಗೂ ನೆರೆಹೊರೆಯವರನ್ನು ಕೊಂದಿದ್ದಾನೆ. ಅಪರಾಧದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!