ತನಗೆ ಕಚ್ಚಿದ ಹಾವನ್ನೇ ಕಚ್ಚಿ ಕೊಂದ ಬಾಲಕ
ಚಂಡೀಗಢ: ಸಾಮಾನ್ಯವಾಗಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ, ಬಾಲಕನೋರ್ವ ತನಗೆ ಕಚ್ಚಿದ ಹಾವನ್ನೇ ಪ್ರತಿಯಾಗಿ ಕಚ್ಚಿ ಕೊಂದಿರುವ ವಿಚಿತ್ರ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.
ಛತ್ತೀಸ್‍ಗಢದ ಜಶ್‍ಪುರ ಜಿಲ್ಲೆಯ ಎಂಟು ವರ್ಷದ ದೀಪಕ್ ಎಂಬ ಬಾಲಕ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಗರ ಹಾವೊಂದು ಆತನ ಕೈಗೆ ಸುತ್ತಿಕೊಂಡು ಎರಡು ಬಾರಿ ಕಚ್ಚಿದೆ. ಈ ವೇಳೆ ಹಾವಿನಿಂದ ಬಿಡಿಸಿಕೊಳ್ಳಲಾಗದೇ, ಕೊನೆಗೆ ವಿಷಪೂರಿತ ಹಾವಿಗೆ ಬಾಲಕ ಕೂಡ ಎರಡು ಬಾರಿ ಕಚ್ಚಿ, ಅದನ್ನು ಕೊಂದಿದ್ದಾನೆ.




