February 3, 2026

ವಿಟ್ಲ: ಅಪ್ರಾಪ್ತ ಬಾಲಕಿಯ ಅಪಹರಿಸಿ, ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ: ಎರಡು ಪ್ರಕರಣದಲ್ಲಿ ನಾಲ್ವರು ಆರೋಪಿಗಳು

0
first-information-report

ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ಳಾಡು ಗ್ರಾಮದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು‌ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ‌ ಪೊಲೀಸರು ಬಂಧಿಸಿದ್ದಾರೆ.‌

ಕೊಳ್ನಾಡು ಗ್ರಾಮದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಮನೆಯವರು‌ ದೂರು‌ ನೀಡಿದ್ದರು. ಈ ಬಗ್ಗೆ ದಿ.23.10.2022 ರಂದು ವಿಟ್ಲ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿತ್ತು.

24.10.2022 ರಂದು ಬಾಲಕಿ ಪತ್ತೆಯಾಗಿದ್ದು, ಈಕೆಯನ್ನು ಸಖಿ ಕೇಂದ್ರಕ್ಕೆ ಹಾಜರುಪಡಿಸಿ ವೈದ್ಯಾಕೀಯ ತಪಾಸಣೆಯನ್ನು ಮಾಡಿಲಾಗಿತ್ತು. ನಂತರ ನೊಂದ ಬಾಲಕಿ ನೀಡಿದ ದೂರಿನಂತೆ ಆರೋಪಿಗಳಾದ ಕನ್ಯಾನ ನಿವಾಸಿ ಸಜಾದ್‌, ಆಸೀಫ್, ಶಾಫಿ ಎಂಬವರ ಮೇಲೆ ಈಗಾಗಲೇ ದಾಖಲಾದ ಪ್ರಕರಣಕ್ಕೆ ಪೋಕ್ಸೋ ಕಾಯ್ದೆ ಅಳವಡಿಸಲಾಗಿದ್ದು, ಸಜಾದ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆಸೀಫ್ ಎಂಬಾತನು ಈಗಾಗಲೇ ವಾರಂಟ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈ ಪ್ರಕರಣದ ಆರೋಪಿ.

ನೊಂದ ಬಾಲಕಿಯ ಹೇಳಿಕೆಯ ಆದಾರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆರೋಪಿ ಸಂಶೀರ್ ಎಂಬಾತನು ನೊಂದ ಬಾಲಕಿಯ ಮನೆಯಲ್ಲಿ ಲೈಂಗಿಕ ಅತ್ಯಾಚಾರ ಮಾಡಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಕಬಕ ನಿವಾಸಿ ಸಂಶೀರ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಎರಡೂ ಪ್ರಕರಣಗಳು ಸೇರಿ ಒಟ್ಟು 3 ಆರೋಪಿಗಳ ಬಂಧನವಾಗಿದ್ದು, ಒಬ್ಬ ಆರೋಪಿ ಶಾಪಿ ತಲೆಮರೆಸಿಕೊಂಡಿದ್ದಾನೆ .

Leave a Reply

Your email address will not be published. Required fields are marked *

error: Content is protected !!