ವಿಟ್ಲ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ
ವಿಟ್ಲ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾಗಿದ್ದ ವಿಟ್ಲ ಪಡ್ನೂರು ಗ್ರಾಮದ ಪೆರುವಾಜೆ ನಿವಾಸಿ ದಿವಾಕರ (36) ಎಂಬಾತನ ಶವ ಪತ್ತೆಯಾಗಿದೆ.
ಈತ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ.
ಇಂದು ಬೆಳಿಗ್ಗೆ ಈತನ ಶವ ಕುಳ ಗ್ರಾಮದ ದಗಮಜಲು ಎಂಬಲ್ಲಿ ಬಾವಿಯಲ್ಲಿ ಶವ ವಾಗಿ ಪತ್ತೆಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಈತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯ ಬಳಿಕ ಸಿಗಬೇಕಾಗಿದ್ದು,ಸ್ಥಳಕ್ಕೆ ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಎಸ್.ಐ.ಸಂದೀಪ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




