December 3, 2024

ಬಂಟ್ವಾಳ: ಸ್ವಚ್ಚಗೊಳಿಸಲು ಬಾವಿಗೆ ಇಳಿದಿದ್ದ ವ್ಯಕ್ತಿ ಅಸ್ವಸ್ಥ, ಅಗ್ನಿಶಾಮಕ ದಳದಿಂದ ರಕ್ಷಣೆ

0

ಬಂಟ್ವಾಳ ತಾಲೂಕಿನ ಗಾಣದಪಡ್ಪು ಎಂಬಲ್ಲಿ ಶ್ರೀ. ಬಿ.ವಾಸು ಪೂಜಾರಿ ಎಂಬವರು ಮನೆಯ ಬಾವಿಯನ್ನು ಸ್ವಚ್ಚಗೊಳಿಸಲು ಬಾವಿಗೆ ಇಳಿದ್ದಿದ್ದು, ಸ್ವಚ್ಚತಾ ಕಾರ್ಯ ಮಾಡುವ ವೇಳೆ ನಿತ್ರಾಣಗೊಂಡು ಬಾವಿಯಿಂದ ಮೇಲೆ ಬರಲು ಆಗದಿದ್ದಾಗ ,ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ಸ್ಥಳಕ್ಕೆ ತೆರಳಿ ಸದರಿಯವರನ್ನು ರಕ್ಷಿಸಿರುತ್ತಾರೆ.

ಅಗ್ನಿಶಾಮಕ ಸಿಬ್ಬಂದಿ ನಂದಪ್ಪ ನಾಯ್ಕೋಡಿಯರವರು ಬಾವಿಗೆ ಇಳಿದು ಶ್ರೀ.ಬಿ.ವಾಸು ಪೂಜಾರಿಯವರನ್ನು ಯಾವುದೇ ಪ್ರಾಣಾಪಾಯ ಇಲ್ಲದೆ ಜೀವಂತವಾಗಿ ಮೇಲಕ್ಕೆತ್ತಿ ರಕ್ಷಿಸಲಾಯಿತು.ಬಂಟ್ವಾಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಯು.ರವೀಂದ್ರ, ಸಿಬ್ಬಂದಿ ಪುರುಷೋತ್ತಮ, ರೋಹಿತ್, ರುಕ್ಕಯ್ಯ ಅಮೀನ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಮತ್ತಿತರರು ಕಾರ್ಯಚರಣೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!