November 21, 2024

ಬಂಟ್ವಾಳ; ನಾವೂರ ಗ್ರಾಮ ಪಂಚಾಯತ್ ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು

0

ಬಂಟ್ವಾಳ; ನಾವೂರ ಗ್ರಾಮಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದೆ.

ಕಳೆದ 20 ವರ್ಷಗಳಿಂದ ದೇವಶ್ಯಪಡೂರು ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಯಾಗಿ ದಾಖಲೆ ಸೃಷ್ಟಿ ಸಿತ್ತು. ಈ ಬಾರಿ ಸಂಘಟಿತ ಹೋರಾಟದ ಫಲವಾಗಿ ನಾವೂರ ಗ್ರಾ.ಪಂ.ನ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಪ್ಪಿ ಅವರು 83 ಮತಗಳ ಅಂತರದಿAದ ಜಯಗಳಿಸಿದ್ದಾರೆ.

ಒಟ್ಟು 1070 ಮತಗಳು ಈ ವಾರ್ಡ್ ನಲ್ಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಪ್ಪಿ ಅವರಿಗೆ 475 ಮತಗಳು ಸಿಕ್ಕಿದರೆ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸುಮಿತ್ರಮೋಹನ್ ಅವರಿಗೆ 392 ಮತಗಳು ಬಿದ್ದಿವೆ, ಅಸಿಂದು 5 ಮತಗಳು ಚಲಾವಣೆ ಆಗಿವೆ. ಈ ಬಾರಿಯ ಉಪಚುನಾವಣೆಯಲ್ಲಿ ದಾಖಲೆಯ ಒಟ್ಟು 872 ಮತಗಳು ಚಲಾವಣೆ ಆಗಿದೆ.

ದೇವಶ್ಯಪಡೂರು ಸದಸ್ಯೆ ಜ್ಯೋತಿ ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರ ಉಪಸ್ಥಿತಿಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಅವರು ಚುನಾವಣಾ ಅಧಿಕಾರಿಯಾಗಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಧಾಮಣಿ ಸಹಾಯಕ ಚುನಾವಣಾ ಅಧಿಕಾರಿ ಯಾಗಿ ಚುನಾವಣಾ ಎಣಿಕೆ ಪ್ರಕ್ರಿಯೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!