ಏಳು ತಿಂಗಳಿಂದ ಕೋಮಾದಲ್ಲಿದ್ದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ರಸ್ತೆ ಅಪಘಾತದಲ್ಲಿ ಗಾಯಗೊಂಡು ಸುಮಾರು 7 ತಿಂಗಳುಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಹೆಣ್ಣು ಮಗಿವಿಗೆ ಮಹಿಳೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ. ಆದರೆ ಎದೆಹಾಲು ಕುಡಿಸುವ ಸಾಮರ್ಥ್ಯ ಮಹಿಳೆಗೆ ಇಲ್ಲದ ಕಾರಣ ಬಬಾಟಲಿ ಹಾಲನ್ನು ಕುಡಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗರ್ಭಿಣಿ ಮಹಿಳೆಯು ಮಾ. 31ರಂದು ಹೆಲ್ಮೆಟ್ ರಹಿತವಾಗಿ ಪತಿಯೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದರು. ಆಕೆಯನ್ನು ಕೂಡಲೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ತಲೆಗೆ ಗಂಭೀರ ಗಾಯವಾದ ಕಾರಣ ಕೋಮಾಗೆ ತಲುಪಿದ್ದರು. ಹೀಗಿದ್ದರೂ ಗರ್ಭಪಾತ ಮಾಡಿಸುವ ಬದಲು ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಮನೆಯವರು ಆಸ್ಪತ್ರೆಯವರೊಂದಿಗೆ ಚರ್ಚಿಸಿದರು. ಬಳಿಕ ಮಹಿಳೆಯನ್ನು ಮೂರು ತಿಂಗಳು ವೆಂಟಿಲೇಟರ್‌ನಲ್ಲಿಟ್ಟು ವಿವಿಧ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ಹಾನಿಗೊಂಡ ಮೆದುಳಿನ ಭಾಗವನ್ನೂ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು. ಮೇಲಿಂದ ಮೇಲೆ ಐದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದಾಗ್ಯೂ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿತ್ತು.
ಇನ್ನು ಘಟನೆ ನಡೆದು ಏಳು ತಿಂಗಳ ಕಾಲ ಕೋಮಾದಲ್ಲೇ ಇದ್ದ ಮಹಿಳೆ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.