December 16, 2025

ಕಾಸರಗೋಡು: ಪೆರಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕುಸಿತ

0
image_editor_output_image1700294376-1667031517341.jpg

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಪೆರಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕುಸಿದು ಬಿದ್ದ ಘಟನೆ ನಡೆದಿದೆ.
ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಮೇಲ್ಸೇತುವೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಐದು ಮಂದಿ ಕಾರ್ಮಿಕರು ಮೇಲ್ಸೇತುವೆಯ ಕಾಂಕ್ರೀಟ್‌ ಕೆಲಸದಲ್ಲಿ ನಿರತರಾಗಿದ್ದರು. ಕಾರ್ಮಿಕನೋರ್ವ ಸಣ್ಣಪುಟ್ಟ ಗಾಯಗೊಂಡಿರುವುದಾಗಿ ಮಾಹಿತಿಯಿದೆ.
ನಿರ್ಮಾಣ ಕಾಮಗಾರಿಯಲ್ಲಿನ ಕುಂದುಕೊರತೆಯಿಂದಾಗಿ ಮೇಲ್ಸೇತುವೆ ಕುಸಿಯಲು ಕಾರಣವೆಂದು ಶಂಕಿಸಲಾಗಿದೆ. ಮೇಲ್ಸೇತುವೆ ಕುಸಿದು ಬಿದ್ದ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!