ಕಾಣಿಯೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆ:
ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ
ಪುತ್ತೂರು: ಕಾಣಿಯೂರಿನಲ್ಲಿ ಮುಸ್ಲಿಂ ಬೆಡ್‌ಶೀಟ್ ವ್ಯಾಪಾರಿಗಳಿಬ್ಬರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆಸಿದ ನಡೆಸಿದ ಘಟನೆ ಹಾಗೂ ಪೊಲೀಸ್ ತಾರತಮ್ಯ ನೀತಿ ಖಂಡಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಅ.28ರಂದು ನಡೆಯಿತು. ವಿವಿಧ ಕಡೆಗಳಿಂದ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



ರಫೀಯುದ್ದೀನ್ ಕುದ್ರೋಳಿ, ಪ್ರೊ. ಅನೀಸ್ ಕೌಸರಿ, ಯಾಕೂಬ್ ಸಅದಿ ನಾವೂರು, ಎಂ.ಎಸ್ ಮುಹಮ್ಮದ್, ಮಾಜಿ ಮೇಯರ್ ಅಶ್ರಫ್ ಹಾಜಿ, ಅಶ್ರಫ್ ಕಲ್ಲೇಗ, ಇಬ್ರಾಹಿಂ ಸಾಗರ್ ಭಾಷಣಗೈದರು.
ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಸಭೆಗೂ ಮುನ್ನ ದರ್ಬೆ ವೃತ್ತದ ಬಳಿಯಿಂದ ನಡೆಸಲು ಉದ್ದೇಶಿಸಿದ್ದ ಕಾಲ್ನಡಿಗೆ ಜಾಥಾವನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಯಿತು.





