February 3, 2026

ಮಣಿಪಾಲ: ಕಾರಿನ ಟಾಪ್ ಮೇಲೆ ಪಟಾಕಿ ಸಿಡಿಸಿ ಅಡ್ಡಾದಿಡ್ಡಿಯಾಗಿ ಸಂಚಾರ: ವಿಡಿಯೋ ವೈರಲ್

0
image_editor_output_image533588936-1666860433961.jpg

ಉಡುಪಿ: ದೀಪಾವಳಿ ಸಂಭ್ರಮದ ನಡುವೆ ಮಣಿಪಾಲದಲ್ಲಿ ಯುವಕನೋರ್ವ ಹುಚ್ಚಾಟ ಮೆರೆದಿದ್ದಾನೆ. ಕಾರಿನ ಟಾಪ್ ಮೇಲೆ ಪಟಾಕಿ ಇಟ್ಟು ಸಿಡಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರಿನ ಮೇಲೆ 50 ಕಂಟಿನ್ಯೂ ರಾಕೆಟ್ ಶಾಟ್ಸ್ ಇಟ್ಟು ಕಾರ್ ಮೂವ್ ಮಾಡಿಕೊಂಡು ಮಣಿಪಾಲದ ಪ್ರಮುಖ ರಸ್ತೆಗಳಲ್ಲಿ ಈತ ಅಡ್ಡಾಡಿದ್ದಾನೆ. ಮಣಿಪಾಲ ದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಈ ರಸ್ತೆಯ ಎರಡೂ ಬದಿ ವಿದ್ಯುತ್ ತಂತಿ ಸುತ್ತಮುತ್ತ ಕಟ್ಟಡ ಆಸ್ಪತ್ರೆ ಕಾಲೇಜು ಇದ್ದು ಜನನಿಬಿಡ ರಸ್ತೆಯಲ್ಲಿ ಈ ರೀತಿ ಓಡಾಡಿದ್ದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಘಟನೆ ಕುರಿತಂತೆ ಸಾರ್ವಜನಿಕರು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!