December 15, 2025

ಯುವಕನಿಗೆ ಫೈಯರ್ ಹೇರ್ ಕಟ್ ವೇಳೆ ಅವಘಡ: ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಯುವಕ

0
image_editor_output_image1913707969-1666859621983.jpg

ಅಹಮದಾಬಾದ್: ಸಲೂನ್ ನಲ್ಲಿ ಫೈಯರ್(ಬೆಂಕಿ) ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವಘಡದಿಂದ ಯುವಕನೊಬ್ಬ ಬೆಂಕಿಯಿಂದ ಗಂಭೀರವಾಗಿ ಸುಟ್ಟು ಗಾಯಗೊಂಡಿರುವ ಘಟನೆ ಗುಜರಾತ್ ನ ವಲ್ಸಾಡ್ ಜಿಲ್ಲೆಯ ವಾಪಿ ನಗರದಲ್ಲಿ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಫೈಯರ್ ಹೇರ್ ಕಟ್ ಜನಪ್ರಿಯತೆಗಳಿಸಿದ್ದು, ಕ್ಷೌರಿಕ ತಮ್ಮ ಗ್ರಾಹಕರಿಗೆ ಹೇರ್ ಡ್ರೈಯರ್, ಫೈಯರ್ ಬಳಸಿ ಕೂದಲನ್ನು ಕತ್ತರಿಸುವುದು ಇದರ ಪ್ರಕ್ರಿಯೆಯಾಗಿದೆ ಎಂದು ವರದಿ ತಿಳಿಸಿದೆ.

ಯುವಕನಿಗೆ ಫೈಯರ್ ಹೇರ್ ಕಟ್ ಮಾಡುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದ್ದು, ಯುವಕನ ಕುತ್ತಿಗೆ ಮತ್ತು ಎದೆಯ ಭಾಗಗಳು ತೀವ್ರ ಸುಟ್ಟುಹೋಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಯುವಕನನ್ನು ವಲ್ಸಾಡ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!