ಅಪರಿಚಿತ ವ್ಯಕ್ತಿಯ ತುಂಡರಿಸಿರುವ ಕೈ ಪತ್ತೆ
ಚಿಕ್ಕಬಳ್ಳಾಪುರ: ಮೊಣ ಕೈವರೆಗೂ ತುಂಡರಿಸಿದ ರೀತಿಯಲ್ಲಿ ಅನಾಮಿಕನ ಕೈಯೊಂದು ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮದೇವರಹಳ್ಳಿ ಬಳಿ ನಡೆದಿದೆ.
ರಾಮದೇವರಹಳ್ಳಿ ಪಕ್ಕದ ಗುಡ್ಡದ ಮೇಲಿನ ಮಣ್ಣಿನ ಗುಡ್ಡೆಯೊಂದರ ಬಳಿ ಅಪರಿಚಿತ ವ್ಯಕ್ತಿಯ ತುಂಡರಿಸಿರುವ ಕೈ ಪತ್ತೆಯಾಗಿದ್ದು, ಇದನ್ನು ಕಂಡ ಸ್ಥಳೀಯರು ದೊಡ್ಡಬೆಳವಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ಸೇರಿದಂತೆ ಸಿಪಿಐ ಹಾಗೂ ಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




