ಅರುಣಾಚಲ ಪ್ರದೇಶದಲ್ಲಿ ಬೆಂಕಿ ಅವಘಡ – 700 ಕ್ಕೂ ಹೆಚ್ಚು ಅಂಗಡಿಗಳು ಅಗ್ನಿಗಾಹುತಿ
ನಹರ್ಲಗುನ್ ನ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 700 ಕ್ಕೂ ಹೆಚ್ಚು ಅಂಗಡಿಗಳು ಬೂದಿಯಾಗಿರುವ ಘಟನೆ ನಡೆದಿದೆ.
ಘಟನಾ ಸ್ಥಳವು ನಹರಲಗುನ್ ಅಗ್ನಿಶಾಮಕ ಇಲಾಖೆ ಕಚೇರಿಯಿಂದ ಸುಮಾರು 20 ಮೀಟರ್ ದೂರದಲ್ಲಿದ್ದರೂ, ಅಧಿಕಾರಿಗಳು ತಕ್ಷಣಕ್ಕೆ ಸೇವೆ ಒದಗಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಬಜಾರ್ ಸಮಿತಿ ಅಧ್ಯಕ್ಷೆ ಕಿರ್ಪಾ ನಾಯ್ ಆರೋಪಿಸಿದ್ದಾರೆ.
ಇನ್ನು ಅಂಗಡಿಯವರು ಅಗ್ನಿಶಾಮಕ ದಳದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.






