August 12, 2026

ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನೀರುಪಾಲು

0
image_editor_output_image1306266905-1666592242545.jpg

ಔರಂಗಾಬಾದ್: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಟ್ಟೆ ತೊಳೆಯಲೆಂದು ಬಾಲಕಿಯರು ನದಿಗೆ ತೆರಳಿದ್ದು, ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ಮೂವರು ಬಾಲಕಿಯರೂ ಕೂಡ ನದಿಯಲ್ಲಿ ಮುಳುಗಿದ್ದಾರೆ.

ಇನ್ನು ದಾರಿಹೋಕರೊಬ್ಬರು ಇದನ್ನು ನೋಡಿದ್ದು, ಕೂಡಲೇ ಬಾಲಕಿಯರ ರಕ್ಷಣೆಗಾಗಿ ಧಾವಿಸಿದ್ದು, ಅವರು ಕೂಡ ನದಿಯ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!