February 4, 2026

ಮಂಜೇಶ್ವರ: ಚಪ್ಪರ ಕುಸಿದು 59 ಮಂದಿಗೆ ಗಾಯ ಪ್ರಕರಣ, ಚಪ್ಪರ ಗುತ್ತಿಗೆದಾರರ ಸಹಿತ 6 ಮಂದಿಯ ಬಂಧನ

0
image_editor_output_image9970058-1666422727177.jpg

ಮಂಜೇಶ್ವರ: ಉಪ ಜಿಲ್ಲಾ ವಿಜ್ಞಾನ ಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಚಪ್ಪರ ಕುಸಿದು 59 ಮಂದಿ ಗಾಯ ಗೊಂಡ ಘಟನೆಗೆ ಸಂಬಂಧ ಪಟ್ಟಂತೆ ಆರು ಮಂದಿ ಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಪ್ಪರದ ಗುತ್ತಿಗೆ ದಾರ ಗೋಕುಲ್ ದಾಸ್, ಅಹಮ್ಮದಾಲಿ ಎ. ಪಿ , ಅಬ್ದುಲ್ ಬಶೀರ್, ಅಬ್ದುಲ್ ಶಾಮಿಲ್, ಇಲ್ಯಾಸ್ ಮುಹಮ್ಮದ್ ಮತ್ತು ಅಶ್ರಫ್ ಬಂಧಿತರು.

ಇವರ ವಿರುದ್ಧ ಜುವೈನಲ್ ಕಾಯ್ದೆ ಸೇರಿದಂತೆ ಹಲವು ಮೊಕದ್ದಮೆ ದಾಖಲಿಸಲಾಗಿದೆ .ಶುಕ್ರವಾರ ಮಧ್ಯಾಹ್ನ ಬೇಕೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿತ್ತು.

ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಆದೇಶ ನೀಡಿದ್ದಾರೆ.ಗಾಯಗೊಂಡು ಮಂಗಳೂರು ಹಾಗೂ ಕಾಸರಗೋಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 15 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.

ಉಳಿದವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!