February 3, 2026

ಮಂಗಳೂರು: ‘ನನ್ನನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ’-ಪ್ರತಿಭಾ ಕುಳಾಯಿ

0
IMG-20221021-WA0044.jpg

ಅಕ್ಟೋಬರ್ 18ರಂದು ಸುರತ್ಕಲ್‌ನಲ್ಲಿ ನಡೆದ ಟೋಲ್ ಗೇಟ್ ಪ್ರತಿಭಟನೆ ವಿಷಯದಲ್ಲಿ ನನ್ನನ್ನು ಟ್ರೋಲ್ ಮಾಡುತ್ತಿರುವ ಸಂಬಂಧ ಹೆದರುವ ಪ್ರಶ್ನೆಯೇ ಇಲ್ಲ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕಿರುಚಾಟದ ವೀಡಿಯೋವನ್ನು ಟ್ರೋಲ್ ಮಾಡುತ್ತಿರುವವರಿಗೆ ನಾನು ಹೇಳುವುದೇನೆಂದರೆ, ಅದೇನು ಲಂಚ, ಮಂಚ ಕುರಿತ ವೀಡಿಯೋವಲ್ಲ. ಲೈಂಗಿಕ ಹಗರಣ, ಭ್ರಷ್ಟಾಚಾರದ ವೀಡಿಯೋ ವೈರಲ್ ಆಗಿದ್ದರೂ ಬಿಜೆಪಿ ನಾಯಕರಾದ ಹಾಲಪ್ಪ, ಜಾರಕಿಹೊಳಿ, ಈಶ್ವರಪ್ಪರೆಲ್ಲ ಧೈರ್ಯವಾಗಿ ಸಾರ್ವಜನಿಕರನ್ನು ಎದುರಿಸಿ ಚುನಾವಣೆಗೆ ನಿಲ್ಲುತ್ತಾರೆ. ಹಾಗಿದ್ದ ಮೇಲೆ ಜನಪರ ಪ್ರತಿಭಟನೆಗೆ ಸಂಬಂಧಿಸಿದ ವೀಡಿಯೋ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು ಎಂದರು.

ಇನ್ನು ಕೆಲವರು ನನ್ನನ್ನು ನಾಗವಲ್ಲಿ ಪಾತ್ರಕ್ಕೆ ಹೋಲಿಸಿ ಟ್ರೋಲ್ ಮಾಡಿದ್ದಾರೆ. ಆದರೆ ನಾನು ಸಿನಿಮಾದಲ್ಲಿ ತೋರಿಸಿರುವ ನಾಗವಲ್ಲಿ ಅಲ್ಲ, ಮೂಲ ನಾಗವಲ್ಲಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!