February 3, 2026

ಮನೆಯಲ್ಲಿ ಗೀಸರ್ ಸ್ಫೋಟ: ಪತಿ, ಪತ್ನಿ ಸಾವು

0
Screenshot_2022-10-21-10-32-37-27_680d03679600f7af0b4c700c6b270fe7.jpg

ಹೈದರಾಬಾದ್: ಮನೆಯಲ್ಲಿ ಗೀಸರ್ ಸ್ಫೋಟಗೊಂಡು ದಂಪತಿ ಸಾವನ್ನಪ್ಪಿರುವ ಘಟನೆ ಲಂಗರ್ ಹೌಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾದರ್ ಬಾಗ್ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಸ್ನಾನಗೃಹದಲ್ಲಿನ ಗೀಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಿಸಾರುದ್ದೀನ್(26) ಮತ್ತು ಆತನ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ(22) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!