ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ – 3 ಮಂದಿ ಮೃತ್ಯು, ಓರ್ವ ನಾಪತ್ತೆ
ಮಧ್ಯಪ್ರದೇಶದ ಮೊರೆನಾದಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 3 ಮಂದಿ ಸಾವನ್ನಪ್ಪಿ, ಒಬ್ಬರು ನಾಪತ್ತೆಯಾಗಿ, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಇಡೀ ಕಟ್ಟಡ ಕುಸಿದು ಬಿದ್ದಿದ್ದು, ಘಟನೆಯಿಂದ ಸ್ಥಳೀಯ ಭಯಭೀತಗೊಂದಿದ್ದಾರೆ.

ಇನ್ನು ಗೋದಾಮಿನ ಮಾಲೀಕ ನಿರ್ಮಲ್ ಜೈನ್ ಮತ್ತು ಅವರ ಬಾಡಿಗೆದಾರರು ಕೂಡ ಕಟ್ಟಡದಲ್ಲಿ ವಾಸಿಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.




