February 3, 2026

ಸಿಲಿಂಡರ್ ಸ್ಫೋಟ: ದಗದಗನೇ ಹೊತ್ತಿ ಉರಿದ ಮನೆ,

0
image_editor_output_image-647494818-1666081135814.jpg

ಕುಣಿಗಲ್: ಸಿಲಿಂಡರ್ ಸ್ಪೋಟಗೊಂಡು ಮನೆ ದಗದಗನೇ ಹೊತ್ತಿ ಉರಿದ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅ. 18ರ ಮಂಗಳವಾರ ನಡೆದಿದೆ.

ಘಟನೆಯ ಪರಿಣಾಮ ಮನೆಯಲ್ಲಿದ್ದ ತಾಯಿ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಿಂಗನಗರಿಗ್ರಾಮ, ಹಾಲಿ ಪಟ್ಟಣದ ಕೆ.ಹೆಚ್.ಬಿ. ಕಾಲೋನಿ ನಿವಾಸಿ ಶೋಭಾ ಅವರ ಮನೆಯ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿದ್ದ ಟಿ.ವಿ., ಫ್ರಿಜ್‌, ವಾಷಿಂಗ್‌ ಮೆಷೀನ್‌ ಸೇರಿದಂತೆ ಲಕ್ಷಾಂತರ ರೂ. ಬೆಲೆ ಬಾಳುವ ಪೀಟೋಪಕರಣಗಳು ಸುಟ್ಟು ಕರಕಲಾಗಿದೆ.

ಶೋಭ ಎಂದಿನಂತೆ ಬೆಳಿಗ್ಗೆ ಸಿಲಿಂಡರ್‌ ಹೊತ್ತಿಸುವ ವೇಳೆ ರೆಗ್ಯುಲೇಟರ್‌ ಕಳಚಿ ಹಾರಿದ ಪರಿಣಾಮ ಈ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!