March 23, 2026

ಮಿತ್ತೂರು: ರೈಲಿನಡಿಗೆ ಬಿದ್ದು ಯುವಕನ ಮೃತದೇಹ ಛಿದ್ರ ಛಿದ್ರ:

0
image_editor_output_image2034978486-1665934777563

ಪುತ್ತೂರು: ರೈಲಿನಡಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಅ.16 ರಂದು ಸಂಜೆ ಮಿತ್ತೂರಿನಲ್ಲಿ ನಡೆದಿದೆ.

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತರಲಾಗಿದ್ದು, ರೈಲಿನಡಿ ಬಿದ್ದಿದ್ದರಿಂದ ಮೃತದೇಹವು ಛಿದ್ರಗೊಂಡಿದೆ.

ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸಂದರ್ಭ ರೈಲ್ವೇ ಪೈಲೆಟ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ನೀಡಿದ ಮಾಹಿತಿಯಂತೆ ಪುತ್ತೂರು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಬಂದಿತ್ತಾದರೂ ವ್ಯಕ್ತಿ ಆಗಲೇ ಮೃತಪಟ್ಟಿದ್ದರಿಂದ ಮುಂದೆ ರೈಲ್ವೇ ಇಲಾಖೆಯ ಪೊಲೀಸ್ ಬಂದ ಬಳಿಕ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ರೈಲು ನಿಲ್ದಾಣದಲ್ಲಿ ಮೃತ ದೇಹವನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ರೈಲಿನಡಿ ಬಿದ್ದ ಯುವಕನನ್ನು ಉತ್ತರ ಪ್ರದೇಶ ಮೂಲದವನು ಎನ್ನಲಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಕಾಲು ಜಾರಿ ಬಿದ್ದನೇ ಎಂಬ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ..

Leave a Reply

Your email address will not be published. Required fields are marked *

error: Content is protected !!