ವಿಟ್ಲ: ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕರೆದ ಅಧಿಕಾರಿಗಳ ಸಮಾಲೋಚನೆ ಸಭೆ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಮೂಡಾ ಅಧಿಕಾರಿಗಳು ತತ್‌ಕ್ಷಣ ಕ್ರಮಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಎಂದು ಹೇಳಿದರು.
ಅವರು ವಿಟ್ಲ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕರೆದ ಅಧಿಕಾರಿಗಳ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯ ಬಳಿ ಕಟ್ಟಡ ನಿರ್ಮಾಣಕ್ಕೆ ಎಷ್ಟು ಅಡಿ ಜಾಗ ಬಿಡಬೇಕು ಎಂಬ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಲೋಕೋಪಯೋಗಿ ಇಲಾಖಾಧಿಕಾರಿಗಳ ಜತೆ ಸಮಾಲೋಚನೆ ಮಾಡಬೇಕು. ಬಡವರಿಗೆ ೧.೩೫ ಸೆಂಟ್ಸ್ ನಿವೇಶನ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದರು.
ಮೂಡಾ ಪಿಡಿ ಅಭಿಷೇಕ್, ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಮತ್ತು ಇತರರು ಉಪಸ್ಥಿತರಿದ್ದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ಎಂ.ವಿಟ್ಲ, ರವೀಶ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ವಿ.ಕೆ.ಎಂ.ಅಶ್ರಫ್, ಸುರೇಶ್ ಬನಾರಿ ಮತ್ತು ‘ಸ್ಕರ ರೈ ಮತ್ತಿತರರು, ಕಟ್ಟಡ ನಿರ್ಮಾಣಕ್ಕೆ ಅನುಮತಿಗಾಗಿ ನಾಗರಿಕರು ಕಳೆದ ೬ ತಿಂಗಳಿಂದ ಓಡಾಡುತ್ತಿದ್ದಾರೆ. ಅವರಿಗೆ ಅನುಮತಿ ಸಿಗುತ್ತಿಲ್ಲ. ಗ್ರಾಮಸ್ಥರಿಗೆ ಗ್ರಾಮದಲ್ಲೇ ಅನುಮತಿ ನೀಡುವಂತಾಗಬೇಕು. ಈ ಬಗ್ಗೆ ಇಂದೇ ಈ ಸ‘ಯಲ್ಲೇ ನಿರ್ಣಯ ಕೈಗೊಂಡು ಸೋಮವಾರದಿಂದ ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ವಿಟ್ಲ ಸಂತೆಯನ್ನು ಬೇರೆ ಕಡೆಗೆ ವರ್ಗಾಯಿಸಬೇಕು. ಹಲವಾರು ವರ್ಷಗಳಿಂದ ನೀಡದ ನಿವೇಶನದ ಹಕ್ಕು ಪತ್ರವನ್ನು ಕೊಡಬೇಕು. ವಿಟ್ಲ ಮಂಗಳೂರು ರಸ್ತೆಯ ಫಲಾನು‘ವಿಗೆ ನೀರು ಸರಬರಾಜು ಮಾಡಬೇಕು. ವಾಣಿಜ್ಯ ಕಟ್ಟಡವನ್ನು ಪೇಟೆಯಲ್ಲಿ ಮಾಡಿ, ಕಚೇರಿಯನ್ನು ಹೊರ‘ಗದಲ್ಲಿ ಮಾಡಬೇಕು. ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ನಾಗರಿಕರ ಸಮಸ್ಯೆಗೆ ಸ್ಪಂದಿಸಬೇಕು ಇತ್ಯಾದಿ ಅಹವಾಲುಗಳನ್ನು ನಾಗರಿಕರು ಸಭೆಯಲ್ಲಿ ಮಂಡಿಸಿದರು.