February 3, 2026

ವಿಟ್ಲ: ಉಕ್ಕುಡ ಮಸೀದಿಯಲ್ಲಿ “ಅರ್ರಬೀಅ್ 2k22”

0
image_editor_output_image-1700028494-1665330911708

ವಿಟ್ಲ:- “ಅರ್ರಬೀಅ್ 2k22” ಎಂಬ ಧ್ಯೇಯ  ವಾಕ್ಯದೊಂದಿಗೆ ಬದ್ರಿಯಾ ಜುಮಾ ಮಸೀದಿ ಉಕ್ಕುಡದಲ್ಲಿ ವಿಜೃಂಭಣೆಯಿಂದ ಪ್ರವಾದಿ (ಸ.ಅ) ರ   ಜನ್ಮದಿನಾಚರಣೆಯನ್ನು ಭಾನುವಾರ (09/10/22) ಆಚರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮವು ಬೆಳಿಗ್ಗೆ 8:00 ಗಂಟೆಗೆ ಸರಿಯಾಗಿ, ಸ್ಥಳೀಯ ಮುದರ್ರಿಸರಾದ  ಹಾಫಿಳ್  ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಉಕ್ಕುಡ ಜುಮಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ THMA ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಕಾರ್ಯಕ್ರಮದ‌‌ ಅಂಗವಾಗಿ ಉಕ್ಕುಡ ಜುಮಾ ಮಸೀದಿಯಿಂದ ಆಲಂಗಾರು ಮತ್ತು ದರ್ಬೆಯವರೆಗೆ ನಡೆದ ಆಕರ್ಷಣೀಯವಾದ ಮೀಲಾದ್ ಜಾಥಾ ನೋಡುಗರನ್ನು ಆಕರ್ಷಿಸಿತು.
  ಜಾಥಾದುದ್ದಕ್ಕೂ ಮದ್ರಸಾ ವಿದ್ಯಾರ್ಥಿಗಳು, ಮುತ-ಅಲ್ಲಿಮರು ಮತ್ತು ಊರಿನ ದೀನಿ ಸ್ನೇಹಿಗಳು ಪ್ರವಾದಿ (ಸ.ಅ) ರ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸಿದರು. ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ನಡೆಯಿತು.
ಲುಹರ್ ನಮಾಝಿನ ಬಳಿಕ ಮೌಲಿದ್ ಪಾರಾಯಣ ನಡೆಯಿತು.
ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮದ್ರಸಾದ ಅಧ್ಯಾಪಕರಾದ ಹಮೀದ್ ಮದನಿ ಕಾನತಡ್ಕ , ಯಾಸೀನ್ ಸ-ಅದಿ ವಿಟ್ಲ, ಮತ್ತು ಅಬ್ದುಲ್ ಖಾದರ್ ಝುಹ್ರಿ ಅಳಕೆ‌ ಮಜಲ್,  ಅದೇ ರೀತಿ ಜಮೀಯತುಲ್ ಫಲಾಹ್  ಬಂಟ್ವಾಳ ಘಟಕದ ಅಧ್ಯಕ್ಷರಾದ ರಶೀದ್ ವಿಟ್ಲ, ಜಮಾಅತಿನ ಕಾರ್ಯದರ್ಶಿಯಾದ ಯು.ಎಸ್ ಶರೀಫ್ ಉಕ್ಕುಡ, ಜಲಾಲಿಯ್ಯ ಕಮಿಟಿ ಅಧ್ಯಕ್ಷರಾದ ಹೈದರ್ ಉಕ್ಕುಡ, ಕಾರ್ಯದರ್ಶಿಯಾದ ಇಕ್ಬಾಲ್ ಉಕ್ಕುಡ, ಮುರ್ಶಿದುಲ್ ಅನಾಂ ಸ್ವಲಾತ್ ಕಮಿಟಿಯ ಉಪಾಧ್ಯಕ್ಷರಾದ ಅಲಾಮ್ ಆಲಂಗಾರ್,‌ ಹಿದಾಯ ಫ್ರೆಂಡ್ಸ್  ಅಧ್ಯಕ್ಷರಾದ ಆಸಿಫ್ ಉಕ್ಕುಡ, ಕಾರ್ಯದರ್ಶಿಯಾದ ಹಾಶಿಂ ಆಲಂಗಾರ್, ಹಾಗೂ ನಾಡಿನ ಸಹಸ್ರಾರು ವಿಶ್ವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!