March 23, 2026

ಉಡುಪಿ: ಅಕಸ್ಮಿಕವಾಗಿ ಕಾಲುಜಾರಿ ಬೋಟಿನಿಂದ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

0
IMG_20221008_172212.jpg

ಉಡುಪಿ: ಮೀನುಗಾರರೊಬ್ಬರು ಅಕಸ್ಮಿಕವಾಗಿ ಕಾಲುಜಾರಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದ ಪರಿಣಾಮ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.

ಮೃತರನ್ನು ರಮೇಶ್ ಕೋಟ್ಯಾನ್ (75) ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ದೇವದಾಸ್ ಮಾಲಕತ್ವದ ಗುರುರಾಘವೇಂದ್ರ ಬೋಟಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತಿದ್ದರು.

ಬೆಳಗಿನ ಜಾವ 4 ಗಂಟೆಗೆ ಮೀನುಗಾರಿಕೆಗೆಂದು ತೆರಳಿದ್ದಾಗ ಘಟನೆ ನಡೆದಿದೆ. ಮೃತ ದೇಹವನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಸಹಕಾರದಿಂದ ಮೇಲಕ್ಕೆತ್ತಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!