March 23, 2026

ಪುತ್ತೂರು: ವ್ಯಕ್ತಿಯೊಬ್ಬರಿಗೆ ಎಸೆದ ಬಾಟಲಿ ಇನ್ನೊಬ್ಬರಿಗೆ ತಾಗಿ ಗಾಯ

0
image_editor_output_image-1779734435-1665209758744.jpg

ಪುತ್ತೂರು:ವ್ಯಕ್ತಿಯೊಬ್ಬರಿಗೆ ಎಸೆದ ಬಾಟಲಿ ಇನ್ನೊಬ್ಬರಿಗೆ ತಾಗಿ ಅವರು ಗಾಯಗೊಂಡ ಘಟನೆ ಕಬಕ ಕರ್ಣಾಟಕ ಬ್ಯಾಂಕ್‌ನ ಆವರಣದಲ್ಲಿ ಅ.7ರಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಕಬಕ ಪಂಜುರ್ಲಿಪಾದೆ ನಿವಾಸಿ ಉಮೇಶ್ ನಾಯ್ಕ್ ಎಂಬವರು ಗಾಯಗೊಂಡವರು.ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಬಕದ ಸೆಲೂನ್‌ವೊಂದರ ಅಕ್ಷಿತ್ ಎಂಬವರು ಬಾಟಲಿ ಎಸೆದವರು ಎಂದು ಗುರುತಿಸಲಾಗಿದೆ. ಕಬಕದ ಬಾರ್‌ವೊಂದರ ಸಿಬ್ಬಂದಿ ಲಕ್ಷ್ಮೀಶ್ ಎಂಬವರು ಕರ್ಣಾಟಕ ಬ್ಯಾಂಕ್ ಕಬಕ ಶಾಖೆಯಲ್ಲಿ ಹಣ ಪಾವತಿ ಮಾಡಲು ಬಂದಾಗ ಸೆಲೂನ್‌ವೊಂದರ ಅಕ್ಷಿತ್ ಎಂಬವರು ಹಲ್ಲೆ ನಡೆಸಲೆಂದು ಎಸೆದ ಬಾಟಲಿ ತಪ್ಪಿ ಅಲ್ಲಿದ್ದ ಉಮೇಶ್ ನಾಯ್ಕ್ ಅವರಿಗೆ ತಾಗಿದೆ.

ತಲೆಗೆ ತೀವ್ರ ಗಾಯಗೊಂಡ ಉಮೇಶ್ ನಾಯ್ಕ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಾಟಲಿ ಎಸೆದ ಅಕ್ಷಿತ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!