ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮೊಹಮ್ಮದ್ ನಲಪಾಡ್, ಕೈ ಕಾರ್ಯಕರ್ತರ ನಡುವೆ ಮಾತಿನಚಕಮಕಿ
ಮಂಡ್ಯ: ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಮೈಸೂರಿನಿಂದ ಹೊರಟ ಭಾರತ್ ಜೋಡೋ ಯಾತ್ರೆ ನಿನ್ನೆ ಮಧ್ಯಾಹ್ನ ಪಾಂಡವಪುರಕ್ಕೆ ಎಂಟ್ರಿಯಾಗಿತ್ತು. ರ್ಯಾಲಿ ನಿಯಂತ್ರಣ ಮಾಡುವ ವಿಚಾರಕ್ಕೆ ಜನರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿತ್ತು
ಈ ವೇಳೆ ಓಡಿ ಬಂದ ನಲಪಾಡ್, ಕೈ ಮುಗಿದು ಜನರನ್ನು ನಿಯಂತ್ರಣ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ನಲಪಾಡ್ ಅವರನ್ನು ಮಂಡ್ಯದ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
“ಹೇ..ಇದು ಬೆಂಗಳೂರು ಅಲ್ಲ” ಎಂದು ಕೈ ಕಾರ್ಯಕರ್ತರೊಬ್ಬರು ಅವಾಜ್ ಹಾಕಿದ್ದಾರೆ. ಅವಾಜ್ ಹಾಕಿದ ಬೆನ್ನಲ್ಲೇ ನಲಪಾಡ್ ಕೈ ಮುಗಿದು ಹಿಂತಿರುಗಿದ್ದಾರೆ.