ರಾಜ್ಯದಲ್ಲಿ PFI ಚಟುವಟಿಕೆ ನಡೆಸುವುದಾಗಲಿ, ಆ ಸಂಘಟನೆ ಪರವಾಗಿ ಮಾತನಾಡಿದರೆ ಕಠಿಣ: ಡಿಜಿಪಿ ಪ್ರವೀಣ್ ಸೂದ್
ಬೆಂಗಳೂರು: ದೇಶದಲ್ಲಿ ಈಗಾಗಲೇ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ನಿಷೇಧವನ್ನು ಹೊರಡಿಸಿರುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಿಎಫ್ ಐ ಚಟುವಟಿಕೆಗಳನ್ನು ನಡೆಸುವುದಾಗಲಿ, ಆ ಸಂಘಟನೆ ಪರವಾಗಿ ಮಾತನಾಡುವುದಾಗಲೀ ಮಾಡಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ರಾಜ್ಯದ ನಾನಾ ಕಡೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೆಲವು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿ ನಡೆದ ಸ್ಥಳಗಳ ತಹಶೀಲ್ದಾರ್ ಗಳ ಮುಂದೆ ಹಾಜರು ಪಡಿಸಿದ್ದು, ಕೆಲವು ಮಂದಿಯನ್ನು ಹತ್ತು, ಹದಿನೈದು, ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದರು.