ವಿಟ್ಲದಲ್ಲಿ ಐಡಿಯಲ್ ಚಿಕನ್ ಸಂಸ್ಥೆ ಶುಭಾರಂಭ
ವಿಟ್ಲ: ವಿಟ್ಲದ ಮೇಗಿನಪೇಟೆಯಲ್ಲಿ ಐಡಿಯಲ್ ಚಿಕನ್ ಸಂಸ್ಥೆ ಶುಭಾರಂಭಗೊಂಡಿದೆ.
ಐಡಿಯಲ್ ಚಿಕನ್ ಸಂಸ್ಥೆ 2005ರಲ್ಲಿ ನೂತನವಾಗಿ ಮಂಗಳೂರಿನಲ್ಲಿ ಪ್ರಥಮ ಶಾಖೆಯನ್ನು ಪ್ರಾರಂಭಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಶಾಖೆ ಹೊಂದಿದ್ದು, ಇದೀಗ ವಿಟ್ಲಕ್ಕೂ 17 ಶಾಖೆಯನ್ನು ಸ್ಥಾಪಿಸುವ ಜತೆಗೆ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ವಿಟ್ಲದಲ್ಲಿ ಪ್ರಥಮವಾಗಿ ಶಾಖೆ ಪ್ರಾರಂಭಿಸಿದ್ದು, ಗ್ರಾಹಕರು ಖುಷಿಪಟ್ಟರು.
ಉತ್ತಮ ಗುಣಮಟ್ಟ, ಸ್ವಚ್ಚತೆ ಸೇರಿದಂತೆ ಮೊದಲಾದ ವಿಭಿನ್ನತೆಯಿಂದ ರಾಜ್ಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಆನ್ ಲೈ ಆ್ಯಪ್ ಮೂಲಕ ಹೋಂ ಡೆಲಿವರಿ ವ್ಯವಸ್ಥೆಯನ್ನು ಒಳಗೊಂಡಿದೆ.
ವಿಟ್ಲ ಶೋಕಮಾತೆಯ ದೇವಾಲಯದ ಧರ್ಮಗುರು
ಐವನ್ ಮೈಕಲ್ ರೋಡ್ರಿಗಸ್, ಸುನೀಲ್ ಪ್ರವೀಣ್ ಪಿಂಟೋ, ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಖತೀಬು ಮಹಮ್ಮದ್ ನಸೀಹ್ ದಾರಿಮಿ ಆಶೀರ್ವಚನ ನೀಡಿದರು. ವಿಟ್ಲ ಏರ್ ಸೌಂಡ್ಸ್ ಮಾಲಕ ಇಬ್ರಾಹಿಂ ಟೇಫ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಎಂ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಪ್, ಡಿ ಗ್ರೂಫ್ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಐಡಿಯಲ್ ಚಿಕನ್ ಸಂಸ್ಥೆಯ ಆಡಳಿತ ನಿರ್ದೇಶಕ ವಿನ್ಸೆಂಟ್ ಕುಟಿನ್ಹ, ಸರ್ಲಿ ಕುಟಿನ್ಹ, ವಿಟ್ಲ ಐಡಿಯಲ್ ಚಿಕನ್ ಸಂಸ್ಥೆಯ ವ್ಯವಸ್ಥಾಪಕ ಸಮದ್ ಮೇಗಿನಪೇಟೆ, ಐಡಿಯಲ್ ಚಿಕನ್ ನ ಜನರಲ್ ಮ್ಯಾನೆಜರ್ ವೈ.ಬಿ ಸುಂದರ, ಎಚ್ಆರ್ ಮೆನೇಜರ್ ಕಿರಣ್ ಕುಮಾರ್, ಎಜೆಎಂ ನಾಸೀರ್ ಮಂಗಳಪದವು, ರವಿವರ್ಮ, ಶಾಫಿ ಮೊಯ್ದಿನ್ ಹಾಜಿ ಕಂಬಳಬೆಟ್ಟು, ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್, ಮತ್ತು ಉದ್ಯಮಿ ಅಝೀಝ್ ಸನ ಮೊದಲಾದವರು ಉಪಸ್ಥಿತರಿದ್ದರು.