ವಿಟ್ಲ: ಲಯನ್ಸ್ ಕ್ಲಬ್ ಗೆ ವಲಯಾಧ್ಯಕ್ಷರ ಭೇಟಿ: ಉತ್ತಮ ಶಿಕ್ಷಕ ಪುರಸ್ಕೃತ ವಿಶ್ವನಾಥ ಗೌಡ ಅವರಿಗೆ ಸನ್ಮಾನ
ವಿಟ್ಲ: ವಿಟ್ಲ ಲಯನ್ಸ್ ವತಿಯಿಂದ ಲಯನ್ಸ್ ವಲಯಾಧ್ಯಕ್ಷರ ಭೇಟಿ ಮತ್ತು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಅವರು ಮಾತನಾಡಿ ಲಯನ್ಸ್ ಕ್ಲಬ್ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡುತ್ತಿದೆ. ವಿಟ್ಲ ಲಯನ್ಸ್ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್ ಈ ಬಾರಿ ನಿರ್ಗತಿಕರಿಗೆ ಸಹಾಯಧನ, ರಕ್ತದಾನ ಶಿಬಿರ, ಶಿಕ್ಷಕ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಮತ್ತು ತಾಲೀಮ್ ಶಿಕ್ಷಕ ದೇಜಪ್ಪ ಪೂಜಾರಿ ನಿಡ್ಯ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಮೀನಾಕ್ಷಿ ಅವರಿಗೆ ಧನಸಹಾಯ ವಿತರಿಸಲಾಯಿತು. ವಿಟ್ಲ ಲಯನ್ಸ್ ಕ್ಲಬ್ ಗೆ ನೂತನವಾಗಿ ತೋಮಸ್ ಡೇನಿಸ್ ಲೋಬೋ ಮತ್ತು ಸಫ್ವಾನ್ ಅಹ್ಮದ್ ಸೇರ್ಪಡೆಗೊಂಡರು.
ವಲಯ ಸಲಹೆಗಾರ ಮಂಗೇಶ್ ಭಟ್, ರೂರಲ್ ಪಿ ಆರ್ ಓ ಡಾ. ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ಕೋಶಾಧಿಕಾರಿ ರವಿಶಂಕರ್, ಕಾರ್ಯದರ್ಶಿ ಜಲಜಾಕ್ಷಿ , ಲಿಯೋ ಅಧ್ಯಕ್ಷ ಯುಕ್ತಾ ಡಿ, ಬಂಟ್ವಾಳ ಸಾಲೆತ್ತೂರು, ಸ್ಪೂರ್ತಿ ಕ್ಲಬ್ ನ ಅಧ್ಯಕ್ಷರು ಉಪಸ್ಥಿತರಿದ್ದರು.
ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ವಿವಿಧ ಜವಾಬ್ದಾರಿ ನಿಭಾಯಿಸಿದರು.




