March 24, 2026

ವಿಟ್ಲ: ರಾಜಕೀಯ ವ್ಯಕ್ತಿಗಳ ಬಗ್ಗೆ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ: ಕುಮಾರ್ ಭಟ್ ಕನ್ಯಾನ ವಿರುದ್ಧ ದೂರು

0
IMG-20220922-WA0019.jpg

ವಿಟ್ಲ: ರಾಜಕೀಯ ವ್ಯಕ್ತಿಗಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ಮತ್ತು ಸುಳ್ಳು ಸುದ್ದಿ ಹರಡಿಸುತ್ತಿದ್ದ ಆರೋಪದ ಮೇಲೆ ಕನ್ಯಾನ ಗ್ರಾಮದ ಬದಿಕೋಡಿ ವೆಂಕಟೇಶ್‌ ಕುಮಾರ್‌ ಭಟ್ ಇವರ ಮೇಲೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಷ್ಕಮಿಗಳಿಂದ ಹತ್ಯೆಯಾದ ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ, ದೀಪಕ್ ರಾವ್, ಮಸೂದ್, ಫಾಝಿಲ್, ಕಬೀರ್, ಪ್ರವೀಣ್‌ ನೆಟ್ಟಾರು ಇವರ ಹತ್ಯೆಯನ್ನು ಮುಂದಿಟ್ಟುಕೊಂಡು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮ ಮತ್ತು ಅಂಚೆ ವ್ಯಾಪ್ತಿಯ ಬದಿಕೋಡಿ ಎಂಬಲ್ಲ ವ್ಯಾಸ್ತವ್ಯವಿರುವ ಶ್ಯಾಮ್ ಭಟ್ ರವರ ಮಗ, ವೆಂಕಟೇಶ್‌ ಕುಮಾರ್‌ ಭಟ್ ಇವರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮತ್ತು ವಾಟ್ಸಾಪ್ ಗ್ರೂಪ್ ನಲ್ಲಿ ಕೋಮು ಪ್ರಚೋಧನಕಾರಿ ಹೇಳಿಕೆ ಮತ್ತು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕದಡಿಸುತ್ತಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಯವರನ್ನು ವೈಯಕ್ತಿಕವಾಗಿ ನಿಂದಿಸಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿ ಮತ್ತು ಎರಡು ಕೊಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಕೋಮು ಪ್ರಚೋಧನಕಾರಿ ಹೇಳಿಕೆ ಮತ್ತು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಪಾಣೆ ಮಂಗಳೂರು ಬ್ಲಾಕ್‌ ಅಧ್ಯಕ್ಷರಾದ ಸುದೀಪ್‌ ಕುಮಾರ್‌ ಶೆಟ್ಟಿ ಗುರುವಾರ ದೂರು ದಾಖಲಿಸಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹದಗೆಟ್ಟದ್ದು ಮತ್ತು ಮಾಜಿ ಶಾಸಕರು ಮತ್ತು ಮಾಜಿ ಸಚಿವರಾದ ರಮಾನಾಥ ರೈ ಯವರ ಘನತೆಗೆ ದಕ್ಕೆ ಉಂಟಾಗುವಂತೆ, ಕೋಮು ಪ್ರಚೋಧನಕಾರಿ ಹೇಳಿಕೆ ಮತ್ತು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣವಾದ ಪೇಸ್‌ಬುಕ್, ವಾಟ್ಸಪ್ ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ವೆಂಕಟೇಶ್‌ ಕುಮಾರ್‌ ಭಟ್ ಮತ್ತು ಇತರರು ಜನತೆಗೆ ಸುಳ್ಳು ಸಂದೇಶ, ಪ್ರಚೋದನಕಾರಿ ಹೇಳಿಕೆ, ಕೋಮು ಸಂಘರ್ಷ ಉಂಟಾಗುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಆದ್ದರಿಂದ ವೆಂಕಟೇಶ್ ಕುಮಾರ್ ಭಟ್ ಮತ್ತು ಇತರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಜನರಿಗೆ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!