August 12, 2026

ಮುಂಬೈನಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು

0
image_editor_output_image-1806807959-1663482048639

ಮುಂಬೈ: ಮುಂಬೈನಲ್ಲಿ ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ನಡೆದಿದೆ.

ಜೆನೆಲ್ ಫೆರ್ನಾಂಡಿಸ್ (26) ಮೃತ ಶಿಕ್ಷಕಿ.

ಇವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಲ್ಲಿ ಲಿಫ್ಟ್‌ಗೆ ಕಾಯುತ್ತಿದ್ದರು.

ಅವರು ಲಿಫ್ಟ್ ಅನ್ನು ಪ್ರವೇಶಿಸಿದಾಗ, ಕೂಡಲೇ ಲಿಪ್ಟ್ ನ ಬಾಗಿಲು ಮುಚ್ಚಲ್ಪಟ್ಟು ಚಲಿಸಲು ಪ್ರಾರಂಭಿಸಿತು. ಆದರೆ ಇವರು ಅದರಲ್ಲೇ ಸಿಲುಕಿಕೊಂಡಿದ್ದರು.

ಅದರ ಮಧ್ಯೆ ಸಿಲುಕಿಕೊಂಡಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು ಎನ್ನುವಂತಹ ಮಾಹಿತಿಯನ್ನು ವಲಯ 11 ರ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಆಕೆಗೆ ಸಹಾಯ ಮಾಡಲು ಶಾಲೆಯ ಸಿಬ್ಬಂದಿ ಧಾವಿಸಿ ಅವಳನ್ನು ಹೊರಗೆ ಎಳೆದರೂ ಕೂಡಾ ರಭಸವಾಗಿ ಚಲಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!