ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜ್ ನಲ್ಲಿ ತ್ರೋಬಾಲ್ ಪಂದ್ಯಾಟ: ತುಂಬೆ ಮತ್ತು ಮೊಡಂಕಾಪು ಪದವಿ ಪೂರ್ವ ಕಾಲೇಜ್ ಗೆ ಪ್ರಶಸ್ತಿ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಮತ್ತು ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ನಡೆಯಿತು.
ಕಾರ್ಯಕ್ರಮವನ್ನು ಜನತಾ ವಿದ್ಯಾ ವರ್ಧಕ ಸಂಘದ ಸಂಚಾಲಕಿ ಡಾ| ಅಶ್ವಿನಿ ಕೃಷ್ಣಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದೇವಾನಂದ ಶೆಣೈ, ಬಂಟ್ವಾಳ ತಾಲೂಕು ಕ್ರೀಡಾ ಸಂಯೋಜಕ ಸಾಯಿರಾಮ್ ತುಂಬೆ, ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ ಶ್ರೀನಿವಾಸ್ , ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ ಆರ್ ನಾಯಕ್ ಹಾಗೂ ಜನತಾ ಇತರ ಕಾಲೇಜುಗಳಿಂದ ಬಂದಿರುವ ತಂಡದ ವ್ಯವಸ್ಥಾಪಕರು, ದೈಹಿಕ ಶಿಕ್ಷಣ ಉಪನ್ಯಾಸಕರುಗಳು, ಹಾಜರಿದ್ದರು. ಶೀನಪ್ಪ ಕೆ, ಜಯಶ್ರೀ ಕೆ.ಆರ್ ಸೋಮಶೇಖರ್ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ವಸಂತ್ ಗೌಡ ವಂದಿಸಿದರು
ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ಪದವಿ ಪೂರ್ವ ಕಾಲೇಜ್ ಮೋಡಂಕಾಪು, ಎಲ್ ಸಿ ಆರ್ ಕಕ್ಯಪದವು
ದ್ವಿತೀಯ ಸ್ಥಾನ ಪಡೆದರೆ,
ಬಾಲಕರ ವಿಭಾಗದಲ್ಲಿ
ತುಂಬೆ ಪದವಿ ಪೂರ್ವ ಕಾಲೇಜು ಪ್ರಥಮ ಮತ್ತು ಕಾರ್ಮೆಲ್ ಪದವಿ ಪೂರ್ವ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕ್ಷಮಾ ಶೆಟ್ಟಿ (ಕಾರ್ಮೆಲ್ ಪ ಪೂ ಕಾಲೇಜು) ಬಾಲಕಿಯರ ಸರ್ವಾಂಗೀಣ ಆಟಗಾರ್ತಿ ಹಾಗೂ ಇರ್ಫಾನ್ (ತುಂಬೆ ಪ ಪೂ ಕಾಲೇಜು)ಬಾಲಕರ ಸರ್ವಾಂಗಿಣ ಆಟಗಾರ ವಿಶೇಷ ಪ್ರಶಸ್ತಿಗೆ ಭಾಜನರಾದರು.





