ದ.ಕ ಜಿಲ್ಲೆಯಲ್ಲಿ ಸೆ. 26ರಿಂದ ಅಕ್ಟೋಬರ್ 10ರವರೆಗೆ ದಸರಾ ರಜೆ: ಸಚಿವ ಬಿ.ಸಿ ನಾಗೇಶ್
ಬೆಂಗಳೂರು: ಮಂಗಳೂರು ಜಿಲ್ಲೆಯಲ್ಲಿ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸೆ. 26ರಿಂದ ಅಕ್ಟೋಬರ್ 10ರವರೆಗೆ ನೀಡುವಂತೆ ಕೋರಿಕೆ ಬಂದಿದ್ದು, ಅದರಂತೆ ಪರಿಶೀಲಿಸಿ ಶೈಕ್ಷಣಿಕ ಚಟುವಟಿಕೆಯನ್ನು ಸರಿದೂಗಿಸುವ ಹಾಗೂ ಅಕ್ಟೋಬರ್ 2ರಂದು ಮಹಾತ್ಮಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇರೆಗೆ ರಜೆಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚನೆ ನೀಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ರಾಜ್ಯದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಪಡಿಸಿ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ. ಅದರಂತೆ ಈ ಮಾರ್ಗಸೂಚಿಯನ್ವಯ ಶಾಲಾರಂಭ, ಶಾಲಾ ಮುಕ್ತಾಯದ ದಿನ, ದಸರಾ, ಬೇಸಿಗೆ ರಜೆ ಹಾಗೂ ಕಿರುಪರೀಕ್ಷೆ/ ಪರೀಕ್ಷೆ ನಡೆಸಬೇಕಾದ ಅವಧಿ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.
ಕೆಲವು ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಮಾರ್ಪಾಡು ಅಗತ್ಯವಿದ್ದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಬದಲಾವಣೆಗಳನ್ನು ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ’ ಎಂದು ಶಿಕ್ಷಣ ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.





