December 15, 2025

ವಿಟ್ಲ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟ: ಬಾಲಕರ ವಿಭಾಗದಲ್ಲಿ ವಿಠಲ ಪ್ರೌಢ ಶಾಲೆ ಮತ್ತು ಬಾಲಕಿಯರ ವಿಭಾಗದಲ್ಲಿ ಅಳಿಕೆ ಸತ್ಯಸಾಯಿ ಶಾಲೆ ಪ್ರಥಮ ಸ್ಥಾನ

0
IMG-20220908-WA0123

ವಿಟ್ಲ: ಚಂದಳಿಕೆ ಸರಕಾರಿ ಶಾಲೆಯಲ್ಲಿ ನಡೆದ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ  ಕಬಡ್ಡಿ ಪಂದ್ಯಾಟದಲ್ಲಿ 17ರ ವಯೋಮಾನದ  ಬಾಲಕರ ವಿಭಾಗದಲ್ಲಿ ವಿಠಲ ಪ್ರೌಢ ಶಾಲೆ ಮತ್ತು ಬಾಲಕಿಯರ ವಿಭಾಗದಲ್ಲಿ ಅಳಿಕೆ ಸತ್ಯಸಾಯಿ ಲೋಕ ಸೇವಾ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾದಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಚಂದಳಿಕೆ ವಿದ್ಯಾವರ್ಧಕ ಸಂಘ(ರಿ.), ಚಂದಳಿಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಚಂದಳಿಕೆ ಇದರ ಸಹಯೋಗದಲ್ಲಿ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ 2022-2023 ಚಂದಳಿಕೆ ಶಾಲಾ ಕ್ರೀಡಾಂಗಣದಲ್ಲಿ ಈ ಪಂದ್ಯಾಟ  ನಡೆಯಿತು.

ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಗಣ್ಯರು ಉಪಸ್ಥಿತರಿದ್ದರು. ವಿಟ್ಲ ವಲಯ ಮಟ್ಟದ ವಿವಿಧ ಶಾಲೆಯ ತಂಡಗಳು ಭಾಗಿಯಾಗಿದ್ದವು.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸತ್ಯಸಾಯಿ ಲೋಕ ಸೇವಾ ಅಳಿಕೆ ಪ್ರಥಮ ಸ್ಥಾನ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ದ್ವಿತೀಯ ಸ್ಥಾನ ಪಡೆದಿದೆ.

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸ.ಹಿ.ಪ್ರಾ.ಶಾಲೆ ಬೊಳಂತಿಮೊಗರು ಪ್ರಥಮ ಸ್ಥಾನ ಹಾಗೂ ಸರಕಾರಿ ಪ್ರೌಢ ಶಾಲೆ ವಿಟ್ಲ ದ್ವಿತೀಯ ಸ್ಥಾನ ಪಡೆದಿದೆ.

ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿದ ಒಟ್ಟು ಕ್ರೀಡಾಪಟುಗಳ ಸಂಖ್ಯೆ 200 ಬಾಲಕರ ವಿಭಾಗದಲ್ಲಿ 15 ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 4 ತಂಡಗಳು ಭಾಗವಹಿಸಿದ್ದವು.

ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ವಿಠಲ ಪ್ರೌಢ ಶಾಲೆ ವಿಟ್ಲ ಪ್ರಥಮ ಸ್ಥಾನ ಹಾಗೂ ಸೈಂಟ್ ಲಾರೆನ್ಸ್ ವಿಜಯಡ್ಕ ದ್ವಿತೀಯ ಸ್ಥಾನ ಪಡೆದಿದೆ.

ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಸತ್ಯಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ ಪ್ರಥಮ ಸ್ಥಾನ ಹಾಗೂ ಸರಕಾರಿ ಪ್ರೌಢ ಶಾಲೆ ವಿಟ್ಲ ದ್ವಿತೀಯ ಸ್ಥಾನ ಪಡೆದಿದೆ.

ಪ್ರೌಢ ವಿಭಾಗದಲ್ಲಿ ಒಟ್ಟು 186 ಕ್ರೀಡಾಪಟುಗಳು ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ 11ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ 5 ತಂಡ ಭಾಗವಹಿಸಿದ್ದವು.

Leave a Reply

Your email address will not be published. Required fields are marked *

error: Content is protected !!