ಮಂಗಳೂರಿನ ಶಿಕ್ಷಣ ಇಲಾಖೆಯ ನೌಕರ ಮಡಿಕೇರಿಯ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ
ಮಡಿಕೇರಿ : ಮಂಗಳೂರಿನ ಶಿಕ್ಷಣ ಇಲಾಖೆಯ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯ ಲಾಡ್ಜ್ ಒಂದಲ್ಲಿ ನಡೆದಿದೆ.
ಮಂಗಳೂರಿನ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿರುವ ಶಿವಾನಂದ್ (45) ಮೃತ ವ್ಯಕ್ತಿ.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‍ನಲ್ಲಿ ಶಿವಾನಂದ್ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರಕಾರಣ ತಿಳಿದುಬಂದಿಲ್ಲ.
ಸಹೋದರ ಕೃಷ್ಣಾನಂದ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





