ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಹಾಕಿದ ಅಮೇರಿಕಾ
ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ವಿವಿಧ ದೇಶಗಳಿಗೆ ಅನ್ವಯಿಸಿ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೇರಿಕಾ ಸೋಮವಾರ ಹಿಂಪಡೆದಿದೆ.
ಮೆಕ್ಸಿಕೋ, ಕೆನಡಾ, ಹಾಗೂ ಯುರೋಪ್ ಮೇಲಿನ ನಿರ್ಬಂಧಗಳನ್ನು ಅಮೇರಿಕಾ ತೆಗೆದುಹಾಕಿದ್ದು, ಆಪ್ತರು ಹಾಗೂ ಕುಟುಂಬ ಸದಸ್ಯರ ಭೇಟಿಗೆ ಅನುವು ಮಾಡಿಕೊಟ್ಟಿದೆ.
ಪೂರ್ಣ ಲಸಿಕೆ ಪಡೆದಿರುವ ದಾಖಲೆಯೊಂದಿಗೆ ಅಮೇರಿಕಾಕ್ಕೆ ಭೇಟಿ ನೀಡಬಹುದಾಗಿದೆ. ಕೊರೊನಾ ಸೋಂಕು ತೀವ್ರವಾಗಿದ್ದ ವೇಳೆ ಅಧಿಕಾರದಲ್ಲಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ನಿರ್ಬಂಧ ಹೇರಿತ್ತು.
ಅಮೇರಿಕಾ ಹಾಗೂ ಯುರೋಪ್ ನಡುವಿನ ಪ್ರಯಾಣಿಕರ ಪ್ರಮಾಣ ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ದಲ್ಲಿ ಈ ತಿಂಗಳು ಶೇ.21ರಷ್ಟು ಹೆಚ್ಚಳವಾಗಿದೆ. ಗಡಿಭಾಗದ ಮೆಕ್ಸಿಕೊ ಹಾಗೂ ಕೆನಡಾದಿಂದಲೂ ರಸ್ತೆ ಮೂಲಕ ಸಂಚರಿಸಲು ಇದ್ದ ನಿರ್ಬಂಧವನ್ನು ಕೂಡಾ ಅಮೇರಿಕಾ ತೆಗೆದು ಹಾಕಿದೆ.