March 24, 2026

ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆ ಮೃತ್ಯು

0
image_editor_output_image-1396478335-1662529144300.jpg

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ.

ಉಮಾದೇವಿ (44) ಮೃತ ದುರ್ದೈವಿ. ಗ್ರಾಮದ 7ನೇ ವಾರ್ಡ್ ನ ನೀರಾವರಿ ಇಲಾಖೆಯ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು. ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ತಾತ್ರಿ ಹೊತ್ತು ನಿರಂತರ ಮಳೆ ಸುರಿಯುತ್ತಿದ್ದು, ಹಳೆಯದಾದ ಮನೆ ಶಿಥಿಲಾವಸ್ಥೆ ತಲುಪಿದೆ.

ಪರಿಣಾಮ ಮಂಗಳವಾರ ರಾತ್ರಿಯೂ ಮಳೆ ಸುರಿದಿದ್ದು, ಮನೆಯೊಳಗೆ ಮಲಗಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ಅಡುಗೆ ಕೋಣೆಯ ಅಡ್ಡಗೋಡೆ ಉಮಾದೇವಿ ಅವರ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!