ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನೆ
ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ಒಕ್ಕೆತ್ತೂರು ಲಯನ್ಸ್ ಭವನದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕರಾದ ತಿರುಮಲೇಶ್ವರ ಭಟ್, ಸುಬ್ರಹ್ಮಣ್ಯ ಭಟ್, ಪಿ ಶ್ಯಾಮ್ ಭಟ್, ಪದ್ಮಯ್ಯ ಗೌಡ, ಪಿ ಗೋವಿಂದ ಭಟ್, ಭವಾನಿ ಟೀಚರ್, ಯಮುನಾ ಟೀಚರ್ ಕೊಲ್ಯ, ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್ ಇಡೀ ಜಿಲ್ಲೆಗೆ ಮಾದರಿಯಾಗಿದ್ದು, ಪ್ರಮಾಣಿಕ ಮತ್ತು ನಿಸ್ವಾರ್ಥ ಸೇವೆಗಳನ್ನು ಮಾಡುವ ಮೂಲಕ ಮುನ್ನಡೆಯುತ್ತಿದ್ದಾರೆ.
ಈ ಸಂದರ್ಭ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಲಯನ್ಸ್ ಮಾಜಿ ಗವರ್ನರ್ ಡಾ. ಗೀತಾಪ್ರಕಾಶ್, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ದಂಬೆಕಾನ, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಗೌಡ, ರೂರಲ್ ಪಿಆರ್ ಓ ಡಾ. ಶರಶ್ಚಂದ್ರ ಶೆಟ್ಟಿ, ವಲಯ ರಾಯಭಾರಿ ಮಂಗೇಶ್ ಭಟ್ ವಿಟ್ಲ, ಜಿಲ್ಲಾ ಗವರ್ನರ್ ಅವರ ಶಾಶ್ವತ ಯೋಜನೆಯ ಸಂಯೋಜಕ ಸಂತೋಷ್ ಶೆಟ್ಟಿ ಪೆಲ್ತಡ್ಕ, ವಿಟ್ಲ ಲಯನ್ಸ್ ಕ್ಲಬ್ ಕೋಶಾಧಿಕಾರಿ ರವಿಶಂಕರ್, ಲಿಯೋ ಅಧ್ಯಕ್ಷೆ ಯುಕ್ತಾ ಡಿ.ಎಂ, ಲೂಯಿಸ್ ಮಸ್ಕರೇಂಞಸ್ ಭಾಗವಹಿಸಿದ್ದರು.




